ಕಾಬೂಲ್ : ಅಪ್ಘಾನಿಸ್ತಾನದಲ್ಲಿ ಪ್ರಭಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭೂಕಂಪನವು ಅಪ್ಘಾನ್ ಹಾಗೂ ತಜಕಿಸ್ತಾನ ಗಡಿಯಲ್ಲಿ ನಡೆದಿದ್ದು, ಇಂದು ಬೆಳಿಗ್ಗೆಯೇ ನಡೆದಿದೆ. ಈ ಸಂದರ್ಭದಲ್ಲಿ ಭಾರತದ ಜಮ್ಮು- ಕಾಶ್ಮೀರ ಪೂಂಜ್ ಹಾಗೂ ಗಡಿ ಭಾಗದಲ್ಲಿ ಕಂಪನದ ಅನುಭವವಾಗಿದೆ.
ವರದಿಯಂತೆ, ಭೂಕಂಪ ಸಂಭವಿಸುತ್ತಿದ್ದಂತೆ ಸದ್ದು ಕೇಳಿ ಜನರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ಕೆಲವು ವಸ್ತುಗಳು ಕೆಳಗೆ ಬಿದ್ದಿವೆ. ಆದರೆ, ಭೂಕಂಪನದಿಂದ ಯಾವುದೇ ಪ್ರಾಣ- ಹಾನಿ ಸಂಭವಿಸಿಲ್ಲ.
ಅಪ್ಘಾನಿಸ್ತಾನ್ ದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಭೂಕಂಪವಾಗಿದ್ದನ್ನು ಸ್ಪಷ್ಟಪಡಿಸಿದ್ದು, ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆ ಸಂಭವಿಸಿದೆ ಎಂದು ಹೇಳಿದೆ.