ಮನೆಯ ಹಿರಿಯರು ಶಕುನ-ಅಪಶಕುನದ ಬಗ್ಗೆ ಹೇಳ್ತಿರುತ್ತಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತು ಕೂಡ ಶಕುನ-ಅಪಶಕುನದ ಸಂಕೇತ ನೀಡುತ್ತದೆ.
ಮನೆಯಲ್ಲಿರುವ ಕೆಲ ವಸ್ತು ಕೆಳಗೆ ಬಿದ್ರೆ, ಮುರಿದ್ರೆ ಅದು ಅಪಶಕುನವೆಂದು ನಂಬಲಾಗುತ್ತದೆ. ನಿಮ್ಮ ಮನೆಯಲ್ಲೂ ಈ ಘಟನೆ ನಡೆದ್ರೆ ನಿರ್ಲಕ್ಷ್ಯ ಮಾಡಬೇಡಿ.
ಬೆಳಿಗ್ಗೆ ಏಳ್ತಿದ್ದಂತೆ ಖಾಲಿ ಬಕೆಟ್ ಕಣ್ಣಿಗೆ ಬಿದ್ರೆ ಅದು ಅಪಶಕುನ. ಖಾಲಿ ಬಕೆಟ್ ಕಣ್ಣಿಗೆ ಬಿದ್ರೆ ಆ ದಿನದ ಕೆಲಸ ಅಪೂರ್ಣವಾಗುತ್ತದೆ ಎಂಬ ಸಂಕೇತ. ಬಾತ್ ರೂಮಿನಲ್ಲಿರುವ ಬಕೆಟ್ ನಲ್ಲಿ ಸದಾ ನೀರಿರುವಂತೆ ನೋಡಿಕೊಳ್ಳಿ.
ಮನೆಯಲ್ಲಿ ಕಬ್ಬಿಣದ ವಸ್ತುಗಳಿದ್ದರೆ ಆತ್ಮಗಳ ಪ್ರವೇಶವಾಗುವುದಿಲ್ಲ. ಆದ್ರೆ ಜಂಗು ಹಿಡಿದ ಕಬ್ಬಿಣದ ವಸ್ತುವನ್ನು ಎಂದೂ ಇಡಬೇಡಿ. ಇದು ಮಂಗಳಕರವಲ್ಲ.
ಮನೆಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಮಹತ್ವವಿರುತ್ತದೆ. ಮನೆಯಲ್ಲಿರುವ ಕನ್ನಡಿ ಒಡೆದ್ರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಒಡೆದ ಕನ್ನಡಿಯನ್ನು ಮನೆಯಲ್ಲಿಡಬಾರದು. ಒಡೆದ ಕನ್ನಡಿ ನೋಡಿಕೊಂಡು ಅಲಂಕಾರ ಮಾಡಿಕೊಳ್ಳಬಾರದು. ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕನ್ನಡಿ ತೋರಿಸಬಾರದು.
ಮನೆಯ ಊಟದ ಟೇಬಲ್ ಮೇಲೆ ಚಾಕು ಇಡಬಾರದು. ಟೇಬಲ್ ಮೇಲಿಟ್ಟ ಚಾಕು ಕೆಳಗೆ ಬಿದ್ರೆ ಅಪಶಕುನ. ಮನೆಯ ಸದಸ್ಯರ ಮಧ್ಯೆ ಗಲಾಟೆ ನಡೆಯುತ್ತದೆ.
ಮನೆಯಿಂದ ಹೊರಗೆ ಹೋಗುವ ವೇಳೆ ಒಂದು ಸೀನು ಬಂದ್ರೆ ಅಥವಾ ಪಕ್ಕದಲ್ಲಿರುವವರು ಒಂದು ಸೀನು ಸೀನಿದ್ರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಇಂಥ ಸಂದರ್ಭದಲ್ಲಿ ಮತ್ತೆ ಮನೆಯೊಳಗೆ ಬಂದು ಸ್ವಲ್ಪ ಸಮಯ ಕುಳಿತು, ನೀರು ಕುಡಿದು ಹೋಗಬೇಕು.
ಮನೆಯಲ್ಲಿ ಜೇಡ ಕಟ್ಟುವುದು, ಬಾವಲಿಗಳು ಮನೆ ಪ್ರವೇಶ ಮಾಡುವುದು ಕೂಡ ಅಪಶಕುನ. ಮನೆಯೊಳಗೆ ಗಾಯಗೊಂಡ ಪಕ್ಷಿ ಪ್ರವೇಶ ಮಾಡಿದ್ರೂ ಅದನ್ನು ಅಪಶಕುನ ಎನ್ನಲಾಗುತ್ತದೆ.