ನಮ್ಮ ಸಮಾಜದಲ್ಲಿ ಈಗ್ಲೂ ಶಕುನ-ಅಪಶಕುನ ಚಾಲ್ತಿಯಲ್ಲಿದೆ. ಕೆಲವು ಸಂಗತಿಗಳನ್ನು ಶುಭ ಶಕುನಕ್ಕೆ ಹೋಲಿಸಿದ್ರೆ ಮತ್ತೆ ಕೆಲವು ಅಪಶಕುನ ಎನ್ನಲಾಗುತ್ತದೆ.
ಸಣ್ಣ ಮಕ್ಕಳಿಗೆ ದೃಷ್ಟಿ ಬೇಗ ತಗಲುತ್ತದೆ. ನಕಾರಾತ್ಮಕ ಶಕ್ತಿಗಳು ಮಕ್ಕಳ ಮೇಲೆ ಬೇಗ ದಾಳಿ ಮಾಡುತ್ತವೆ. ಅವುಗಳನ್ನು ತಪ್ಪಿಸಲು ಕಬ್ಬಿಣದ ವಸ್ತುಗಳನ್ನು ಮಕ್ಕಳು ಮಲಗುವ ಜಾಗದಲ್ಲಿ ಅವರ ತಲೆ ಹತ್ತಿರ ಇಡಬೇಕೆಂದು ನಂಬಲಾಗಿದೆ. ಆದ್ರೆ ನಕಾರಾತ್ಮಕ ಶಕ್ತಿ ಓಡಿಸುವ ಕಬ್ಬಿಣ ತುಕ್ಕು ಹಿಡಿದ್ರೆ ಅದನ್ನು ಅಪಶಕುನವೆನ್ನಲಾಗುತ್ತದೆ.
ಮನೆಯ ಟ್ಯಾಪ್ ನಿಂದ ಸದಾ ನೀರು ಬೀಳ್ತಿದ್ದರೆ ಅದು ಆರ್ಥಿಕ ನಷ್ಟಕ್ಕೆ ದಾರಿ ಮಾಡುತ್ತೆ ಎಂದು ನಂಬಲಾಗಿದೆ. ಹಾಗೆ ಬೆಳ್ಳಂಬೆಳಿಗ್ಗೆ ಬಾತ್ ರೂಮಿನಲ್ಲಿ ಖಾಲಿ ಬಕೆಟ್ ನೋಡಿದ್ರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಖಾಲಿ ಬಕೆಟ್ ನೋಡುವುದ್ರಿಂದ ಆರ್ಥಿಕ ಹಾಗೂ ಮಾನಸಿಕ ಸಮಸ್ಯೆ ಕಾಡುತ್ತದೆ.
ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆಂದು ನಂಬಲಾಗಿದೆ. ಆದ್ರೆ ಶುಭ ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋಗುವ ವೇಳೆ ಪೊರಕೆ ಕಂಡಲ್ಲಿ ಅಥವಾ ಪೊರಕೆ ಹಿಡಿದು ಮನೆ ಸ್ವಚ್ಛಗೊಳಿಸುತ್ತಿದ್ದರೆ ಅದನ್ನು ಅಪಶಕುನ ಎನ್ನಲಾಗುತ್ತದೆ. ಪೊರಕೆಯನ್ನು ಮೂಲೆಯಲ್ಲಿ ಇಡಬೇಕು. ಅದು ಎಲ್ಲರ ಕಣ್ಣಿಗೆ ಕಾಣುವಂತೆ ಇರಬಾರದು. ಗಾಜಿನ ತುಂಡುಗಳು ಮನೆಯಲ್ಲಿ ಬಿದ್ದಿದ್ದರೆ ಅದು ಅಪಶಕುನ. ಮನೆಯಲ್ಲಿ ನಾಯಿ ಹಾಗೂ ಬೆಕ್ಕು ಅತ್ತರೆ ಅಥವಾ ಪರಸ್ಪರ ಜಗಳವಾಡಿದರೆ ಇದು ಕೂಡ ಒಳ್ಳೆಯದಲ್ಲ. ಕೆಲ ಅಹಿತಕರ ಘಟನೆಯ ಸಂಕೇತವಾಗಿದೆ.