alex Certify ಅಪರೂಪದ ‘ಶಿಶ್ನ ಹೂವು’ ಕಿತ್ತ ಯುವತಿಯರು; ಕಾಂಬೋಡಿಯಾ ಸರ್ಕಾರದಿಂದ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ‘ಶಿಶ್ನ ಹೂವು’ ಕಿತ್ತ ಯುವತಿಯರು; ಕಾಂಬೋಡಿಯಾ ಸರ್ಕಾರದಿಂದ ವಾರ್ನಿಂಗ್

ಕಳೆದ ವರ್ಷ, ನೆದರ್‌ಲ್ಯಾಂಡ್‌ನ ಡಚ್ ನಗರದ ಲೈಡೆನ್‌ನಲ್ಲಿರುವ ಉದ್ಯಾನದಲ್ಲಿ ಸುಮಾರು 25 ವರ್ಷಗಳ ನಂತರ ಅಪರೂಪದ ಶಿಶ್ನ ಸಸ್ಯದ ಹೂವು ಮೊದಲ ಬಾರಿಗೆ ಅರಳಿತು. ತಜ್ಞರ ಪ್ರಕಾರ, ಯುರೋಪ್‌ನಲ್ಲಿ ಈ ಸಸ್ಯದಲ್ಲಿ ಮೂರನೇ ಬಾರಿಗೆ ಹೂವು ಅರಳಿದೆ. ಅಂದಹಾಗೆ, ಅಪರೂಪದ ಸಸ್ಯ ‘ನೆಪೆಂಥಿಸ್ ಹೋಲ್ಡೆನಿ’ ಪಶ್ಚಿಮ ಕಾಂಬೋಡಿಯಾದ ಪರ್ವತ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ.

ಪುರುಷ ಜನನಾಂಗವನ್ನು ಹೋಲುವ ಈ ಮಾಂಸಹಾರಿ ಸಸ್ಯದ ಹೂವನ್ನು ಮೂವರು ಯುವತಿಯರು ಕೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ಕಾಂಬೋಡಿಯಾ ಸರ್ಕಾರ ಅದನ್ನು ಕೀಳದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಪರೂಪದ ಈ ಸಸ್ಯವು ನಶಿಸಬಹುದೆಂಬ ಆತಂಕದಿಂದ ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ಸರ್ಕಾರ ಹೇಳಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಪ್ರೀತಿಸಿ, ಆದರೆ ನಾಶ ಮಾಡಬೇಡಿ ಎಂದು ಜನರಲ್ಲಿ ಕಾಂಬೋಡಿಯಾ ಸರ್ಕಾರ ಮನವಿ ಮಾಡಿದೆ.

ಸಸ್ಯಗಳು ತಮ್ಮ ಆಹಾರವನ್ನು ಜೀವಂತ ಕೀಟಗಳನ್ನು ಸೇವಿಸುವ ಮೂಲಕ ಕಡಿಮೆ ಪೌಷ್ಠಿಕಾಂಶದ ಮಣ್ಣಿನಲ್ಲಿ ಬದುಕುತ್ತವೆ. ಬೇಟೆಯನ್ನು ಆಕರ್ಷಿಸಲು ತಮ್ಮ ಮಕರಂದ ಮತ್ತು ಸಿಹಿ ಪರಿಮಳವನ್ನು ಇವು ಬಳಸುತ್ತವೆ.

ಕಾಂಬೋಡಿಯಾದ ಕಾಂಪೋಟ್ ಪ್ರಾಂತ್ಯದ ಬೋಕೋರ್ ಪರ್ವತದಲ್ಲಿ, ಮೂವರು ಯುವತಿಯರು ಅಳಿವಿನಂಚಿನಲ್ಲಿರುವ ಹೂವುಗಳನ್ನು ಕೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಜೊತೆಗೆ ಅವರು ಸೆಲ್ಫಿಗಳನ್ನು ಕೂಡ ಕ್ಲಿಕ್ಕಿಸಿದ್ದಾರೆ.

ಖಾಸಗಿ ಜಮೀನುಗಳಲ್ಲಿನ ಕೃಷಿ ವಿಸ್ತರಣೆ ಮತ್ತು ಪ್ರವಾಸೋದ್ಯಮವನ್ನು ಸಂರಕ್ಷಿತ ಪ್ರದೇಶಗಳಾಗಿ ಬೆಳೆಸುವ ಕಾರಣದಿಂದಾಗಿ, ಮಾಂಸಾಹಾರಿ ಸಸ್ಯಗಳ ನೈಸರ್ಗಿಕ ಆವಾಸಸ್ಥಾನಗಳು ಕಾಂಬೋಡಿಯಾದಲ್ಲಿ ಕ್ಷೀಣಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...