ಹೈದರಾಬಾದ್: ಜೆಲಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಹೈದರಾಬಾದ್ ಖಾಸಗಿ ಆಸ್ಪತ್ರೆಯೊಂದು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದೆ.
ಜೆಲಾಸ್ಟಿಕ್ ಸಮಸ್ಯೆಯಲ್ಲಿ ಯಾವುದೇ ಸ್ಪಷ್ಟ ಕಾರಣ, ಪರಿಸ್ಥಿತಿ ಅಥವಾ ಕಾರಣವಿಲ್ಲದೆ ಹಠಾತ್ ನಗುವನ್ನು ಉಂಟುಮಾಡುತ್ತದೆ. ಜಿಲಾಸ್ಟಿಕ್ ರೋಗವು ಸಾಮಾನ್ಯವಾಗಿ ಬಾಲ್ಯದಲ್ಲಿ, ನವಜಾತ ಶಿಶುವಿನ ಅವಧಿಯಲ್ಲಿ ಕಂಡುಬರುತ್ತವೆ. ಈ ಖಾಯಿಲೆ ಬಹಳ ಅಪರೂಪ ಮತ್ತು ಪ್ರತಿ 200,000 ಮಕ್ಕಳಲ್ಲಿ ಒಬ್ಬರು ಮಾತ್ರ ಈ ಅಸಹಜತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳಿಂದ ತಿಳಿದು ಬಂದಿವೆ.
ಗ್ರೇಸ್ ಪೋಷಕರು ತಮ್ಮ ಮಗುವಿನ ಚಿಕಿತ್ಸೆಗಾಗಿ ಅಲೆದಾಡಿದ ಆಸ್ಪತ್ರೆಗಳಿಲ್ಲ. ಕೊನೆಗೆ ಎಲ್ ಬಿ ನಗರದ ಕಾಮಿನೇನಿ ಆಸ್ಪತ್ರೆಯ ಮೊರೆ ಹೋಗಿದ್ದಾರೆ. ಮಗುವಿಗೆ ಅಸಹಜ ನಗು ಬಂದಾಗ ವೈದ್ಯರು ಕೂಲಂಕುಷವಾಗಿ ಪರಿಶೀಲಿಸಿದ್ದಾರೆ. ನಂತರ ಮಗುವಿಗೆ ಜೆಲಾಸ್ಟಿಕ್ ಖಾಯಿಲೆಯಿದೆ ಎಂದು ತಿಳಿದುಬಂದಿದೆ.
ವೈದ್ಯರ ಪ್ರಕಾರ, ಆರು ತಿಂಗಳ ಹಿಂದೆ, ಮಗುವಿಗೆ ತಿಂಗಳಿಗೊಮ್ಮೆ ಈ ಸಮಸ್ಯೆ ಕಂಡುಬರುತ್ತಿತ್ತು. ಅದು 10 ಸೆಕೆಂಡುಗಳವರೆಗೆ ಇರುತ್ತಿತ್ತು. ಆದರೆ, ಇತ್ತೀಚೆಗೆ ದಿನಕ್ಕೆ 5 ರಿಂದ 6 ಬಾರಿ ಮತ್ತು ಸೆಳವಿನ ಅವಧಿಯು ಒಂದು ನಿಮಿಷಕ್ಕೆ ಏರಿದೆ.
ನರಶಸ್ತ್ರಚಿಕಿತ್ಸಕ, ನರವಿಜ್ಞಾನಿ, ಶಿಶುವೈದ್ಯ ಮತ್ತು ಅಂತಃಸ್ರಾವಶಾಸ್ತ್ರಜ್ಞರ ತಂಡವು ಮಗುವಿಗೆ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಈಗಾಗಲೇ ಮಗು ಪ್ರೌಢಾವಸ್ಥೆಯ ಹಂತವನ್ನು ತಲುಪಿತ್ತು. ಗೆಡ್ಡೆಯಲ್ಲಿನ ನ್ಯೂರಾನ್‌ಗಳು ಹೆಟೆರೊಟೋಪಿಕ್ ಹಾರ್ಮೋನ್ ನಾಡಿ-ಜನರೇಟರ್ ಆಗಿ ಕಾರ್ಯನಿರ್ವಹಿಸುತ್ತವೆ.
ವೈದ್ಯರು ಮಗುವಿನ ಪೋಷಕರಿಗೆ ಪರಿಸ್ಥಿತಿ, ಅಪರೂಪದ ಕಾಯಿಲೆ, ಶಸ್ತ್ರಚಿಕಿತ್ಸೆಯ ಅವಶ್ಯಕತೆ ಮತ್ತು ಅಪಾಯದ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಚಿಕಿತ್ಸೆಯ ಇತರ ವಿಧಾನಗಳ ಬಗ್ಗೆ ಪೋಷಕರಿಗೆ ವಿವರಿಸಲಾಯಿತು. ನಂತರ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.