alex Certify ಅಪರೂಪದ ʼಕ್ಯಾಟ್ ​ಫಿಶ್ʼ​ ಹಿಡಿದ 15 ರ ಹುಡುಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ʼಕ್ಯಾಟ್ ​ಫಿಶ್ʼ​ ಹಿಡಿದ 15 ರ ಹುಡುಗ

ಯುಎಸ್​ನಲ್ಲಿ 15 ವರ್ಷದ ಹುಡುಗನೊಬ್ಬ ಅಪರೂಪದ ಬಿಳಿ ಬಣ್ಣದ ಕ್ಯಾಟ್​ ಫಿಶ್​ ಬೇಟೆಯಾಡಿದ್ದಾನೆ.

ಟೆನ್ನೇಸ್ಸಿ ವೈಲ್ಡ್​ಲೈಫ್​ ರಿಸೋರ್ಸಸ್​ ಏಜೆನ್ಸಿ ಮಾಹಿತಿ ಪ್ರಕಾರ ಎಡ್ವರ್ಡ್​ ತರುಮಿಯಾಂಜ್​ ಜೂನ್​ 28 ರಂದು ಸಿನಿಕ್​ ಸಿಟಿ ಫಿಶಿಂಗ್​ ಚಾರ್ಟರ್ಸ್​ನಿಂದ ರಿಚರ್ಡ್​ ಸಿಮ್ಸ್​ ನೇತೃತ್ವದಲ್ಲಿ ಮೀನುಗಾರಿಕೆ ಪ್ರವಾಸದಲ್ಲಿ ತೊಡಗಿದ್ದಾಗ ಅಸಾಮಾನ್ಯ ಕ್ಯಾಟ್​ ಫಿಶ್ ​ಹಿಡಿದಿದ್ದಾನೆ. ಅದು ಇಕ್ಟಾಲರಸ್​ ಫರ್ಕಾಟಸ್​ ಜಾತಿಗೆ ಸೇರಿದ್ದಾಗಿತ್ತು.

ಸಾಮಾನ್ಯವಾಗಿ ಈ ಜಾತಿಯ ಮೀನು ವಿಶಿಷ್ಟವಾಗಿ ನೀಲಿ-ಬೂದು ಬಣ್ಣ ಹೊಂದಿರುತ್ತದೆ, ಎಡ್ವರ್ಡ್ಸ್​ ಹಿಡಿದ ಮಾದರಿಯು ಹೆಚ್ಚಾಗಿ ಬಿಳಿಯಾಗಿತ್ತು, ಅದರ ರೆಕ್ಕೆಗಳ ಮೇಲೆ ಕೆಲವು ತಿಳಿ ಗುಲಾಬಿ ಬಣ್ಣ ಕಾಣಿಸಿದೆ.

ಕ್ಯಾಟ್​ ಫಿಶ್​ ಹಿಡಿದ ಬಳಿಕ ಫೋಟೋ ತೆಗೆದುಕೊಂಡು ಪುನಃ ಅದನ್ನು ನೀರಿಗೆ ಬಿಡಲಾಯಿತು. ಈ ಮಧ್ಯೆ ಸಾಮಾಜಿಕ ಜಾಲತಾಣ ಬಳಕೆದಾರರು ಹುಡುಗನ ಅಪರೂಪದ ಸಾಹಸವನ್ನು ಶ್ಲಾಘಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...