ಸಾಮಾನ್ಯವಾಗಿ ಹುಲಿಗಳು ಹಳದಿ ಬಣ್ಣದಲ್ಲಿರುವುದು ನಮಗೆ ತಿಳಿದಿದೆ. ಅಲ್ಲದೇ ಕಾಡಿನಲ್ಲಿ, ಮೃಗಾಲಯಗಳಲ್ಲಿ ಈ ಬಣ್ಣದ ಹುಲಿಗಳೇ ಕಂಡು ಬರುತ್ತವೆ. ಆದರೆ ಇಲ್ಲೊಂದು ಅಪರೂಪದ ಹುಲಿ ಪತ್ತೆಯಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ತಮ್ಮ ಫಾಲೋವರ್ ಗಳಿಗೆ ವಿಶಿಷ್ಟ ಫೋಟೋ ಹಾಗೂ ವಿಡಿಯೋ ಮೂಲಕ ಮಾಹಿತಿ ನೀಡುವ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಾಂತ ನಂದಾ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅಪರೂಪದಲ್ಲಿ ಅಪರೂಪವಾದ ʼಕಪ್ಪು ಹುಲಿʼ ಸೆರೆಯಾಗಿದೆ.
ಒಡಿಶಾದ ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಹುಲಿ ಕಂಡು ಬಂದಿದ್ದು, ಅರಣ್ಯದಲ್ಲಿ ಅಳವಡಿಸಲಾಗಿದ್ದು, ವಿಡಿಯೋ ಕ್ಯಾಮರಾದಲ್ಲಿ ಈ ಹುಲಿಯ ದೃಶ್ಯ ಸೆರೆಯಾಗಿದೆ. ಕಪ್ಪು ಹುಲಿಯ 15 ಸೆಕೆಂಡ್ ಕಾಲಾವಧಿಯ ಈ ವಿಡಿಯೋ ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.