ಅಪರಾಧಿಗಳು ತಮ್ಮ ಕೃತ್ಯಗಳನ್ನು ಎಸಗಲು ಬಹುತೇಕ ರಾತ್ರಿ ಸಮಯವನ್ನೇ ಆರಿಸಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಗಸ್ತು ಪೊಲೀಸರಿಗೆ ಸಿಕ್ಕಿಬಿದ್ದರೂ ಸಹ ಸುಳ್ಳು ಮಾಹಿತಿ ನೀಡಿ ಕೆಲವೊಮ್ಮೆ ತಪ್ಪಿಸಿಕೊಳ್ಳುತ್ತಾರೆ. ಈಗ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ ಶಿವಮೊಗ್ಗ ಪೊಲೀಸರು.
ಹೌದು, ಇದೀಗ ಶಿವಮೊಗ್ಗದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಬೈಲ್ ಗೆ ‘ಕ್ರೈಂ ಅಂಡ್ ಕ್ರಿಮಿನಲ್ ಟ್ರಾಕಿಂಗ್ ನೆಟ್ವರ್ಕ್ ಸಿಸ್ಟಮ್’ ಅನ್ನು ಅಳವಡಿಸಲಾಗುತ್ತಿದ್ದು ಇದರ ಮೂಲಕ ಅಪರಾಧಿಗಳ ಹಿನ್ನೆಲೆಯನ್ನು ಜಾಲಾಡಬಹುದಾಗಿದೆ.
ಫಿಂಗರ್ ಪ್ರಿಂಟ್ ಸ್ಕ್ಯಾನರ್ ಮೂಲಕ ಇದು ಕಾರ್ಯನಿರ್ವಹಿಸಲಿದ್ದು, ಅಪರಾಧಿಗಳ ಫಿಂಗರ್ ಪ್ರಿಂಟ್ ಸ್ಕ್ಯಾನ್ ಮಾಡಿದ ವೇಳೆ ಇವರುಗಳು ಈ ಹಿಂದೆ ಯಾವುದಾದರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರಾ ಎಂಬ ಮಾಹಿತಿ ತಕ್ಷಣವೇ ತಿಳಿದು ಬರಲಿದೆ. ಈ ಮೂಲಕ ಅವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ.