ಕಾರು ಅಪಘಾತವೊಂದರಲ್ಲಿ ಹಾಲಿವುಡ್ ನಟಿ ಅನ್ನೆ ಹೆಚ್ಚೆ ದೇಹ ಬಹುತೇಕ ಸುಟ್ಟು ಹೋಗಿದೆ. ಕ್ಯಾಲಿಫೋರ್ನಿಯಾದಲ್ಲಿ ನಟಿಯ ಕಾರು ಅಪಘಾತಕ್ಕೀಡಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು, ಈ ವೇಳೆ ಅನ್ನೆ ಹೆಚ್ಚೆಗೆ ತೀವ್ರವಾದ ಸುಟ್ಟ ಗಾಯಗಳಾಗಿವೆ.
53ರ ಹರೆಯದ ಅನ್ನೆ ನೀಲಿ ಬಣ್ಣದ ಮಿನಿ ಕೂಪರ್ ಕಾರನ್ನು ಚಲಾಯಿಸುತ್ತಿದ್ರು. ಮೊದಲು ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್‌ಗೆ ಕಾರು ಡಿಕ್ಕಿಯಾಗಿದೆ. ಈ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ಆಕೆಗೆ ಸಹಾಯ ಮಾಡಬೇಕೆಂದು ಸುತ್ತಮುತ್ತ ಇದ್ದವರು ಧಾವಿಸಿ ಬರುವಷ್ಟರಲ್ಲಿ ನಟಿಯೇ ಅಲ್ಲಿಂದ ಓಡಿ ಹೋಗಿದ್ದಾರೆ.
ಸದ್ಯ ನಟಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗ್ತಿದೆ. ಆಕೆ ಎಚ್ಚರವಾಗಿಯೇ ಇದ್ದಾಳೆ, ಉಸಿರಾಡುತ್ತಿದ್ದಾರೆ. ಆದ್ರೆ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಡೊನ್ನಿ ಬ್ರಾಸ್ಕೋ, ಸಿಕ್ಸ್ ಡೇಸ್ ಸೆವೆನ್ ನೈಟ್ಸ್, ವಾಗ್ ದ ಡಾಗ್‌ನಂತಹ ಜನಪ್ರಿಯ ಚಿತ್ರಗಳಲ್ಲಿ ಅನ್ನೆ ನಟಿಸಿದ್ದಾರೆ.
ಎಲ್ಲೆನ್ ಡಿ ಜನರಸ್ ಜೊತೆಗೆ ಆಕೆ ಅಫೇರ್ ಕೂಡ ಹೊಂದಿದ್ದರು. ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರಿಂದ ತನ್ನನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ನಟಿ ಆರೋಪಿಸಿದ್ದರು. ದಿ ಬ್ರೇವ್, ಕ್ವಾಂಟಿಕೊ, ಚಿಕಾಗೋ ಪಿಡಿ ಸೇರಿದಂತೆ ಅನೇಕ ಟಿವಿ ಸಿರೀಸ್‌ಗಳಲ್ಲಿ ಸಹ ಅನ್ನೆ ನಟಿಸಿದ್ದಾರೆ.