alex Certify ಅನ್ ಲಾಕ್ 2.0 ಬಗ್ಗೆ ನಾಳೆ ನಿರ್ಧಾರ; 3ನೇ ಅಲೆ ಬಗ್ಗೆ ಸಿಎಂ ಹೇಳಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ ಲಾಕ್ 2.0 ಬಗ್ಗೆ ನಾಳೆ ನಿರ್ಧಾರ; 3ನೇ ಅಲೆ ಬಗ್ಗೆ ಸಿಎಂ ಹೇಳಿದ್ದೇನು…?

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಆರ್ಭಟ ಕೊಂಚ ಇಳಿಮುಖವಾಗಿದ್ದು, ಅನ್ ಲಾಕ್ 2.0 ಬಗ್ಗೆ ನಾಳೆ ಸಂಜೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸಂಪುಟ ಪುನಾರಚನೆ ವಿಚಾರ; ಸಿ.ಟಿ.ರವಿ ಹೇಳಿದ್ದೇನು….?

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎರಡನೇ ಹಂತದ ಲಾಕ್ ಡೌನ್ ಸಡಿಲೆಕೆ ಬಗ್ಗೆ ನಾಳೆ ಸಂಜೆ ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಕೊರೊನಾ ಮೂರನೇ ಅಲೆ ಭೀತಿ ಕೂಡ ಎದುರಾಗಿದೆ. ಈ ನಿಟ್ಟಿನಲ್ಲಿಯೂ ಎಚ್ಚರಿಕೆ ಕೈಗೊಳ್ಳುವ ಅಗತ್ಯವಿದೆ. ಇದರ ನಡುವೆ ಎರಡನೇ ಹಂತದ ಅನ್ ಲಾಕ್ ನಲ್ಲಿ ಯಾವುದಕ್ಕೆಲ್ಲ ವಿನಾಯಿತಿ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಿಲ್ಲದ ಡೆಡ್ಲಿ ವೈರಸ್​ ಅಟ್ಟಹಾಸ: 29 ದೇಶಗಳಲ್ಲಿ ಪತ್ತೆಯಾಯ್ತು ಹೊಸ ರೂಪಾಂತರಿ ʼಕೊರೊನಾʼ – ವಿಶ್ವ ಆರೋಗ್ಯ ಸಂಸ್ಥೆಯಿಂದ ಆಘಾತಕಾರಿ ಮಾಹಿತಿ ಬಹಿರಂಗ

ಇದೇ ವೇಳೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಜೂನ್ 21ರಿಂದ ಅನ್ ಲಾಕ್ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಈಗಿರುವ ಲಾಕ್ ಡೌನ್ ಸ್ವಲ್ಪ ಮಟ್ಟಿಗೆ ಸಡಿಲಿಸಲಾಗುವುದು. ಆದರೆ ಕೊರೊನಾ ಮೂರನೇ ಅಲೆ ಪ್ರರಂಭವಾಗಲಿದೆ ಎಂಬ ಸೂಚನೆ ಹಿನ್ನೆಲೆಯಲ್ಲಿ ಮುಂಜಾಗೃತೆ ಅಗತ್ಯವಾಗಿದೆ. ಹಾಗಾಗಿ ವೀಕೆಂಡ್ ನಲ್ಲಿ ಈಗಿನಂತೆಯೇ ಕರ್ಫ್ಯೂ ಮುಂದುವರೆಸುವ ಬಗ್ಗೆಯೂ ಚಂತನೆ ನಡೆದಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...