ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರಿ ಗಮನ ಸೆಳೆದಿರುವ ‘ಅನ್ಯಾಯಕಾರಿ ಬ್ರಹ್ಮ’ ಜನಪದ ಹಾಡು ದಿನಕ್ಕೊಂದು ರೂಪದಲ್ಲಿ ವೈರಲ್ ಆಗುತ್ತಲೇ ಇದೆ. ಇದೀಗ ಹುಡುಗರ ಗುಂಪೊಂದು ದೇವಸ್ಥಾನದ ಬಳಿ ನಿಂತು ಈ ಹಾಡಿಗೆ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿಯಾಗಿದೆ.
ಸುಂದರ ಸನ್ಯಾಸಿ ಹುಡುಗರು ಈ ಹಾಡಿಗೆ ಆಂಜನೇಯನ ಗುಡಿಯ ಮೆಟ್ಟಿಲುಗಳ ಮೇಲೆ ನಿಂತು ಹೆಜ್ಜೆ ಹಾಕಿದ್ದು, ಈಗಲಾದರೂ ಹೆಣ್ಣುಮಕ್ಕಳು ಕರುಣೆ ತೋರಿಸಿ ಎಂಬ ಮಾತು ವೈರಲ್ ಆಗುತ್ತಿದೆ. ಕರುಣೆ ಇರುವ ಹೆಣ್ಣುಮಕ್ಕಳು ಈ ಸುಂದರ ಹುಡುಗರ ಕಡೆಗೆ ಕಣ್ಣು ಬಿಡಬಾರದೇ ? ಎಂದು ಹೇಳಲಾಗುತ್ತಿದೆ.
ಶ್ರೇಷ್ಠ ಜಾನಪದ ಕಲಾವಿದ ಡಾ.ಮಳವಳ್ಳಿ ಮಹಾದೇವಸ್ವಾಮಿ ಹಾಡಿರುವ ಅರ್ಜುನ ಜೋಗಿ ಜಾನಪದ ಕಥನ ಕಾವ್ಯದ ಆಯ್ದ ಸಾಲುಗಳ ಅನ್ಯಾಯಕಾರಿ ಬ್ರಹ್ಮ ಆಧುನಿಕ ನೃತ್ಯ ಸಂಯೋಜನೆಯ ವಿಡಿಯೋ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.