alex Certify ಅನ್ನ ಮತ್ತು ಚಪಾತಿಗೆ ಬೆಸ್ಟ್​ ಕಾಂಬಿನೇಷನ್ ತೊಂಡೆಕಾಯಿ ಡ್ರೈ ಫ್ರೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನ್ನ ಮತ್ತು ಚಪಾತಿಗೆ ಬೆಸ್ಟ್​ ಕಾಂಬಿನೇಷನ್ ತೊಂಡೆಕಾಯಿ ಡ್ರೈ ಫ್ರೈ

ತೊಂಡೆಕಾಯಿ ಕೆಲವೇ ಕೆಲವರಿಗೆ ಪ್ರಿಯವಾಗುವ ತರಕಾರಿ. ಹೇರಳ ಪೋಷಕಾಂಶವನ್ನು ಹೊಂದಿರುವ ತೊಂಡೆಕಾಯಿ ಡ್ರೈ ಫ್ರೈ ಮಾಡಿದ್ರೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಸಂಜೆಯ ಚಪಾತಿಗೆ ಇದು ಬೆಸ್ಟ್ ಕಾಂಬಿನೇಷನ್. ಹಾಗಾದ್ರೆ ತೊಂಡೆಕಾಯಿ ಡ್ರೈ ಫ್ರೈ ಮಾಡೋದು ಹೇಗೆ ನೋಡೋಣ ಬನ್ನಿ.

ಬೇಕಾಗುವ ಸಾಮಗ್ರಿಗಳು

ಅರ್ಧ ಕೆಜಿ ತೊಂಡೆ ಕಾಯಿ, ಈರುಳ್ಳಿ ಅರ್ಧ ಕಪ್, ಬೆಳ್ಳುಳ್ಳಿ 8 ಎಸಳು, ಜೀರಿಗೆ ಕಾಳು ಅರ್ಧ ಚಮಚ, ಬಿಳಿ ಎಳ್ಳು 2 ಟೀ ಸ್ಪೂನ್, ದನಿಯಾ ಕಾಳು 2 ಟೀ ಸ್ಪೂನ್, ತೆಂಗಿನಕಾಯಿ ಪುಡಿ 2 ಟೀ ಸ್ಪೂನ್, ಅರಿಶಿನ ಅರ್ಧ ಟೀ ಸ್ಪೂನ್, ಉಪ್ಪು 1 ವರೆ ಚಮಚ, ಒಣ ಮೆಣಸಿನಕಾಯಿ 8.

ತೊಂಡೆಕಾಯಿ ಡ್ರೈ ಫ್ರೈ ಮಾಡುವ ವಿಧಾನ

ಮೊದಲಿಗೆ ಒಂದು ಪ್ಯಾನ್ ಇಟ್ಟು ಅರ್ಧ ಚಮಚ ಜೀರಿಗೆ ಕಾಳು, 2 ಟೀ ಸ್ಪೂನ್ ಬಿಳಿ ಎಳ್ಳು, 2 ಟೀ ಸ್ಪೂನ್ ದನಿಯಾ ಕಾಳುಗಳನ್ನು ಹುರಿದುಕೊಳ್ಳಬೇಕು. ಇದಕ್ಕೆ ಕೆಂಪುಮೆಣಸಿನ ಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಿ. ಬಳಿಕ 2 ಟೀ ಸ್ಪೂನ್​ ತೆಂಗಿನಪುಡಿ ಹಾಕಿ ಹುರಿದುಕೊಳ್ಳಿ. ನಂತರ ಸ್ಟೌ ಆಫ್ ಮಾಡಿ ಈ ಮಿಶ್ರಣ ತಣ್ಣಗಾಗಲು ಬಿಡಿ.

ಬಳಿಕ ಒಂದು ಮಿಕ್ಸಿ ಜಾರಿಗೆ ಈ ಮಿಶ್ರಣವನ್ನು ಹಾಕಿಕೊಂಡು ಜೊತೆಗೆ 7-8 ಬೆಳ್ಳುಳ್ಳಿ ಎಸಳು ಸೇರಿಸಿ ಡ್ರೈ ಪುಡಿ ಮಾಡಿಕೊಳ್ಳಿ. ನಂತರ ಒಂದು ಪ್ಯಾನ್ ಇಟ್ಟು 2 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಹೆಚ್ಚಿಟ್ಟುಕೊಂಡ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಅರ್ಧ ಚಮಚ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ಬಳಿಕ ವೃತ್ತಾಕರದಲ್ಲಿ ಹೆಚ್ಚಿಕೊಂಡ ತೊಂಡೆಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಿ.

ತೊಂಡೆಕಾಯಿ ಅರ್ಧ ಬೆಂದ ನಂತರ 1 ವರೆ ಚಮಚ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಪುನಃ ಬೇಯಿಸಿಕೊಳ್ಳಿ. ಹೀಗೆ ತೊಂಡೆಕಾಯಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಂತರ ರುಬ್ಬಿಕೊಂಡಿರುವ ಮಿಶ್ರಣ ಸೇರಿಸಿ ಮಿಕ್ಸ್ ಮಾಡಿ ಸಣ್ಣ ಉರಿಯಲ್ಲಿ 5 ನಿಮಿಷ ಬೇಯಿಸಿಕೊಂಡ್ರೆ ತೊಂಡೆಕಾಯಿ ಡ್ರೈ ಫ್ರೈ ಸವಿಯಲು ಸಿದ್ಧ.

ಅನ್ನದ ಜೊತೆಗೆ ಸೈಡ್​ ಡಿಶ್​ ಆಗಿ ಇಲ್ಲವೇ ಚಪಾತಿ ಜೊತೆಗೂ ಬೆಸ್ಟ್​ ಕಾಂಬಿನೇಷನ್.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...