ಸಾಮಾನ್ಯವಾಗಿ ತೂಕ ಹೆಚ್ಚಾದವರಿಗೆ ಡಾಕ್ಟರ್ ಅನ್ನ ತಿನ್ನಬೇಡಿ, ರೊಟ್ಟಿ, ಮೊಳಕೆಕಾಳು ತಿನ್ನಿ ಅಂತ ಸಲಹೆ ನೀಡುತ್ತಾರೆ. ಅನ್ನ ಊಟ ಮಾಡಿದರೆ ತೂಕ ಹೆಚ್ಚುತ್ತದೆ ಎಂಬುದು ಹಲವರ ಅಭಿಮತ. ಆದರೆ ಇದು ಸುಳ್ಳು.
ಹೆಚ್ಚಿನ ಜನರು ತೂಕ ಕಡಿಮೆ ಮಾಡಲೆಂದು ಅನ್ನವನ್ನು ಕಡಿಮೆ ಉಪಯೋಗಿಸಿ ಗೋಧಿ ರೊಟ್ಟಿಯನ್ನು ತಿನ್ನುತ್ತಾರೆ. ಬಿಳಿ ಅನ್ನದಿಂದ ಕಾರ್ಬೋಹೈಡ್ರೇಡ್ ಸಿಗುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಒದಗುತ್ತದೆ. ತೂಕ ಹೆಚ್ಚುತ್ತದೆಂದು ಅನ್ನ ಬಿಟ್ಟರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಅನ್ನದಲ್ಲಿರುವ ಅಮಿನೋ ಎಸಿಡ್ ಮಾಂಸಖಂಡಗಳನ್ನು ಗಟ್ಟಿಯಾಗಿಸುತ್ತದೆ.
ಹೆರಿಗೆ ವೇಳೆ ಹೆಣ್ಣು ಮಗು ಜನಿಸಿದೆ ಎಂದು ಹೇಳಿ ಡಿಸ್ಚಾರ್ಜ್ ಸಮಯದಲ್ಲಿ ಗಂಡು ಮಗು ಕೊಟ್ಟ ಆಸ್ಪತ್ರೆ ವಿರುದ್ಧ ದೂರು
ಅನ್ನದಲ್ಲಿ ಅತೀ ಹೆಚ್ಚು ಮ್ಯಾಗ್ನೀಶಿಯಮ್ ಇರುತ್ತದೆ. ಇದರಿಂದ ಇಮ್ಯುನಿಟಿ ಹೆಚ್ಚುತ್ತದೆ. ಬೇಗನೆ ಜೀರ್ಣವಾಗುವುದರಿಂದ ಹೊಟ್ಟೆಗೂ ಆರಾಮದಾಯಕವಾಗಿರುತ್ತದೆ. ಬಿಳಿ ಅನ್ನದಲ್ಲಿ ಕಡಿಮೆ ಫೈಬರ್ ಇರುವ ಕಾರಣ ಇದು ಹೊಟ್ಟೆಯ ಅನೇಕ ರೋಗಗಳನ್ನು ದೂರಮಾಡುತ್ತದೆ. ಬಿಳಿ ಅನ್ನ ಬೇಗನೆ ಜೀರ್ಣವಾಗುವುದರಿಂದ ಆರಾಮದಾಯಕವಾಗಿರುತ್ತದೆ. ಆದ್ದರಿಂದ ಅನ್ನ ತಿಂದರೆ ಬೊಜ್ಜು ಬರುತ್ತದೆ, ತೂಕ ಹೆಚ್ಚಾಗುತ್ತದೆ ಎಂಬುದು ಸುಳ್ಳು ಎಂದು ವರದಿಯೊಂದು ಹೇಳಿದೆ.