ಮನೆಯಲ್ಲಿ ತರಕಾರಿ ಇಲ್ಲದೇ ಇದ್ದಾಗ, ಅಥವಾ ಟೊಮೆಟೋ ಹೆಚ್ಚಿದ್ದಾಗ ಮಾಡಿ ನೋಡಿ ರುಚಿಯಾದ ಈ ಟೊಮಟೊ ಸಾಂಬಾರು.
½ ಕಪ್- ಕಾಯಿತುರಿ, ½- ಟೀ ಸ್ಪೂನ್ ಜೀರಿಗೆ, 2 ಚಮಚ- ಎಣ್ಣೆ, 1/2 ಟೀ ಸ್ಪೂನ್- ಸಾಸಿವೆ, 2-ಒಣಮೆಣಸು , 5 ರಿಂದ 6 ಎಸಳು -ಬೆಳ್ಳುಳ್ಳಿ , 1 ಟೀ ಸ್ಪೂನ್- ಇಂಗು, 2- ಈರುಳ್ಳಿ, 6 ರಿಂದ 7- ಟೊಮೆಟೊ, 1/2 ಸ್ಪೂನ್ -ಅರಶಿನ, 1/4 ಕಪ್- ಬೇಳೆ(ಬೇಯಿಸಿಕೊಂಡಿರಬೇಕು), 10 ರಿಂದ 11 ಎಸಳು- ಕರಿಬೇವು, ಹಸಿಮೆಣಸು-3, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರು ಪುಡಿ-2 ಚಮಚ, ಕೊತ್ತಂಬರಿ ಸೊಪ್ಪು-ಸ್ವಲ್ಪ.
ಮಾಡುವ ವಿಧಾನ : ಮೊದಲಿಗೆ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಅದಕ್ಕೆ ಸಾಸಿವೆ ಹಾಕಿ ಅದು ಸಿಡಿದಾಗ ಜೀರಿಗೆ ಹಾಕಿ. ನಂತರ ಜಜ್ಜಿದ ಬೆಳ್ಳುಳ್ಳಿ, ಕತ್ತರಿಸಿದ ಈರುಳ್ಳಿ, ಒಣ ಮೆಣಸು, ಇಂಗು, ಅರಿಶಿನ, ಕರಿಬೇವು , ಹಸಿಮೆಣಸು, ಟೊಮೆಟೊ ಹಾಕಿ ಎಲ್ಲವನ್ನು ಚನ್ನಾಗಿ ಫ್ರೈ ಮಾಡಿಕೊಳ್ಳಬೇಕು.
ನಂತರ ಬೇಯಿಸಿಕೊಂಡ ಬೇಳೆ ಸೇರಿಸಿ ಮಿಕ್ಸ್ ಮಾಡಿ. ಒಂದು ಕುದಿ ಬಂದ ಮೇಲೆ ಅದಕ್ಕೆ ಸಾಂಬಾರು ಪೌಡರ್, ಕಾಯಿತುರಿ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಸಾಂಬಾರು ಸವಿಯಲು ಸಿದ್ಧ. ಇದು ಅನ್ನದ ಜತೆ ಚೆನ್ನಾಗಿರುತ್ತದೆ.