ಕರ್ಪೂರವನ್ನು ಪೂಜೆಗೆ ಮಾತ್ರ ಬಳಸುವುದಿಲ್ಲ. ಕರ್ಪೂರದಿಂದ ಅನೇಕ ಲಾಭಗಳಿವೆ. ಕರ್ಪೂರ ನಿಮ್ಮ ಯಶಸ್ಸಿನ ಮಂತ್ರವಾಗಬಲ್ಲದು.
ಕರ್ಪೂರದ ಸುವಾಸನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಒತ್ತಡದಲ್ಲಿರುವ ವ್ಯಕ್ತಿ ಕರ್ಪೂರದ ಹೊಗೆ ಪಡೆಯುತ್ತಿದ್ದಂತೆ ರಿಲ್ಯಾಕ್ಸ್ ಆಗುತ್ತಾನೆ. ಎಣ್ಣೆಗೆ ಕರ್ಪೂರ ಸೇರಿಸಿ ಮಸಾಜ್ ಮಾಡುವಂತೆಯೂ ಸಲಹೆ ನೀಡಲಾಗುತ್ತದೆ.
ಆಯುರ್ವೇದದಲ್ಲೂ ಕರ್ಪೂರಕ್ಕೆ ಸಾಕಷ್ಟು ಮಹತ್ವ ನೀಡಲಾಗಿದೆ. ಅನೇಕ ದಿನಗಳಿಂದ ಕಫ ಸಮಸ್ಯೆಯಿಂದ ಬಳಲುವ ವ್ಯಕ್ತಿಗೆ ಇದು ಮದ್ದು. ಆಯುರ್ವೇದ ಔಷಧಿಯಲ್ಲಿ ಇದನ್ನು ಬಳಸಲಾಗುತ್ತದೆ.
ಮನೆಯಲ್ಲಿ ಕರ್ಪೂರ ಹಚ್ಚುವುದ್ರಿಂದ ಕೆಟ್ಟ ಜೀವಾಣುಗಳ ನಾಶವಾಗುತ್ತದೆ. ಸುತ್ತಲಿನ ವಾತಾವರಣ ಶುದ್ಧವಾಗುತ್ತದೆ. ಮನೆಯೊಳಗೆ ಯಾವುದೇ ಕೀಟಾಣು ಪ್ರವೇಶ ಮಾಡುವುದಿಲ್ಲ.
ಚರ್ಮ ಸಮಸ್ಯೆಯನ್ನು ಕರ್ಪೂರ ದೂರ ಮಾಡುತ್ತದೆ. ಮೊಡವೆ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ತೆಂಗಿನ ಎಣ್ಣೆಗೆ ಕರ್ಪೂರ ಹಾಕಿ ಹಚ್ಚಿಕೊಳ್ಳಿ.
ಕೂದಲಿನ ಸೌಂದರ್ಯ ವೃದ್ಧಿಗೂ ಕರ್ಪೂರ ಬಳಸಲಾಗುತ್ತದೆ. ಕೂದಲು ಉದುರುತ್ತಿದ್ದರೆ ತೆಂಗಿನ ಎಣ್ಣೆಗೆ ಕರ್ಪೂರ ಬಳಸಿ ಹಚ್ಚಬಹುದು.