ಜನರು ಬೇಸಿಗೆಯನ್ನು ಇಷ್ಟಪಡುತ್ತಾರೆ, ಏಕೆಂದರೆ ಈ ಋತುವಿನಲ್ಲಿ ನೆಚ್ಚಿನ ಹಣ್ಣು ಮಾವು ಸಿಗುತ್ತದೆ. ಮಾಲ್ಡಾ ಮಾವು, ದುಸೇರಿ ಮಾವು, ತೋತಾಪರಿ ಮಾವು, ಹಾಪುಸ್, ಸಿಂಧೂರ, ಚೌಸ ಹೀಗೆ ಹಲವು ವಿಧದ ಮಾವುಗಳು ಬಾಯಲ್ಲಿ ನೀರೂರಿಸುತ್ತವೆ.
ಆದರೆ ನೀವು ಎಂದಾದರೂ ಬಿಳಿ ಮಾವಿನ ಹಣ್ಣನ್ನು ತಿಂದಿದ್ದೀರಾ? ಬಾಲಿಯಲ್ಲಿ ಕಂಡುಬರುವ ಬಿಳಿ ಮಾವನ್ನು ವಾಣಿ ಎಂದು ಕರೆಯಲಾಗುತ್ತದೆ. ನಿಧಾನವಾಗಿ ಈ ಹಣ್ಣಿನ ಜನಪ್ರಿಯತೆ ಹೆಚ್ಚುತ್ತಿದೆ.
ಈಗ ಬೇರೆ ಬೇರೆ ನಗರಗಳಲ್ಲೂ ಇದು ಲಭ್ಯವಾಗ್ತಿದೆ. ಬಿಳಿ ಮಾವು ಕೇವಲ ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯಕ್ಕೂ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಬಿಳಿ ಮಾವಿನ ಹಣ್ಣಿನ ಪ್ರಯೋಜನಗಳು
ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ಉಂಟುಮಾಡಲು ಸ್ವತಂತ್ರ ರಾಡಿಕಲ್‌ಗಳು ಕಾರಣವಾಗಿವೆ. ಬಿಳಿ ಮಾವನ್ನು ತಿನ್ನುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಏಕೆಂದರೆ ಬಿಳಿ ಮಾವಿನ ಹಣ್ಣಿನಲ್ಲಿ ಎಂಟಿಒಕ್ಸಿಡೆಂಟ್‌ಗಳಿರುತ್ತವೆ. ಬಿಳಿ ಮಾವಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಬಿಳಿ ಮಾವು ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಹೈಡ್ರೇಟೆಡ್ ಮತ್ತು ಆರೋಗ್ಯಕರವಾಗಿ ಇಡುತ್ತದೆ. ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿದ್ದರೆ, ಅನೇಕ ರೋಗಗಳನ್ನು ತಪ್ಪಿಸಬಹುದು. ಬಿಳಿ ಮಾವಿನ ಹಣ್ಣುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸರಿಪಡಿಸಬಲ್ಲದು. ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಬಿಳಿ ಮಾವು ಪರಿಪೂರ್ಣ ಪರಿಹಾರವಾಗಿದೆ.
ಪ್ರೋ ವಿಟಮಿನ್ ಎ ಎಂದೂ ಕರೆಯಲ್ಪಡುವ ಬಿಳಿ ಮಾವಿನ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಕಂಡುಬರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಬೀಟಾ ಕ್ಯಾರೋಟಿನ್ ಸೇವನೆಯು ರೆಟಿನಾವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ಬೀಟಾ ಕ್ಯಾರೋಟಿನ್ ರಾತ್ರಿ ಕುರುಡುತನದ ಸಮಸ್ಯೆಯಿಂದ ನಿಮ್ಮನ್ನು ರಕ್ಷಿಸುತ್ತದೆ.
ಬಿಳಿ ಮಾವಿನ ಹಣ್ಣಿನಲ್ಲಿರುವ ಬೀಟಾ ಕ್ಯಾರೋಟಿನ್ ಅಸ್ಥಿಸಂಧಿವಾತದ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಈ ಗುಣವು ದೇಹದ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬಿಳಿ ಮಾವಿನ ಹಣ್ಣನ್ನು ತಿನ್ನುವುದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಇದು ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.