ಪೋರಬಂದರ್ ನಲ್ಲಿ ಮೀನುಗಾರಿಕಾ ದೋಣಿ ಮಾಲೀಕರಿಗೆ ಅನುಮಾನಾಸ್ಪದ ವಸ್ತುಗಳನ್ನು ಹೊಂದಿದ್ದ ಪಾರಿವಾಳ ಸಿಕ್ಕಿದ್ದು, ಅವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಎರಡು ಪಾರಿವಾಗಳು ಮೀನುಗಾರಿಕಾ ದೋಣಿಯಲ್ಲಿ ಡಿ.5ರಂದು ಬಂದು ಕುಳಿತಿವೆ. ಅವುಗಳನ್ನು ಮೀನುಗಾರರು ಹಾಗೂ ದೋಣಿಯಲ್ಲಿರುವವರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಅವುಗಳ ಕಾಲುಗಳಲ್ಲಿ ಉಂಗುರದ ರೀತಿಯಲ್ಲಿ ಸಣ್ಣ ಆಕಾರದ ವಸ್ತುಗಳು ಕಂಡು ಬಂದಿವೆ.
ಈ ದೋಣಿ ಶನಿವಾರ ಪೋರಬಂದರ್ ತಲುಪಿದೆ. ಆಗ ಈ ಪಾರಿವಾಳಗಳನ್ನು ದೋಣಿ ಮಾಲೀಕರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಮಿತ್ ಗೋಹಿಲ್ ತಿಳಿಸಿದ್ದಾರೆ. ಅಲ್ಲದೇ, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿ, ಪರೀಕ್ಷೆ ಹಾಗೂ ತಪಾಸಣೆಗಾಗಿ ಸಾಧನವನ್ನು ಗಾಂಧಿನಗರಕ್ಕೆ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.