ಕೇವಲ ಮನೆ ನಿರ್ಮಾಣದ ವೇಳೆಯಲ್ಲಿ ಮಾತ್ರ ವಾಸ್ತು ಶಾಸ್ತ್ರ ನೋಡಿದ್ರೆ ಸಾಲದು. ಮನೆಯಲ್ಲಿ ವಾಸಿಸೋಕೆ ಆರಂಭ ಮಾಡಿದ ಬಳಿಕವೂ ಮನೆಯಲ್ಲಿ ಕೆಲ ಬದಲಾವಣೆ ಮಾಡಬೇಕಾಗುತ್ತೆ. ಇಲ್ಲವಾದಲ್ಲಿ ಅದು ನಿಮ್ಮ ಜೀವಕ್ಕೇ ಕುತ್ತು ತರಬಹುದು.
ಮನೆಯ ಎಲ್ಲಾ ಸದಸ್ಯರು ಆರೋಗ್ಯದಿಂದ ಇರಬೇಕು ಅನ್ನೋದು ಪ್ರತಿ ಕುಟುಂಬದ ಮೊದಲ ಆಸೆ. ಆದರೆ ಈ ರೀತಿ ಆಗಬೇಕು ಅಂದ್ರೆ ನೀವು ವಾಸ್ತು ಶಾಸ್ತ್ರದ ಕೆಲ ನಿಯಮಗಳನ್ನ ಪಾಲಿಸಲೇಬೇಕು. ಮನೆಯಲ್ಲಿನ ಕೆಲ ವಸ್ತುಗಳನ್ನ ಹೊರ ಹಾಕಿದ್ರೆ ಅನಾರೋಗ್ಯ ಅನ್ನೋದು ನಿಮ್ಮ ಹತ್ತಿರವೂ ಸುಳಿಯಲ್ಲ.
ಅಡುಗೆ ಮನೆಯಲ್ಲಿ ಒಡೆದು ಹೋದ ಪಾತ್ರೆ ಇಲ್ಲವೇ ಬಾಕ್ಸ್ಗಳನ್ನ ಇಡಲೇಬೇಡಿ. ಇದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಅಂಶ ಹೆಚ್ಚಾಗೋ ಸಾಧ್ಯತೆ ಇರುತ್ತೆ. ಅಲ್ಲದೇ ಮನೆ ಸದಸ್ಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತೆ.
ದೇವರ ಕೋಣೆಯಲ್ಲಿ ಒಡೆದು ಹೋದ ದೇವರ ವಿಗ್ರಹ ಇಲ್ಲವೇ ಫೋಟೋ ಇದ್ರೆ ಮೊದಲು ಅದನ್ನ ವಿಸರ್ಜಿಸಿ. ವಾಸ್ತು ಶಾಸ್ತ್ರದ ಪ್ರಕಾರ ಬಿರುಕುಬಿಟ್ಟ ವಿಗ್ರಹದ ಪೂಜೆಯಿಂದ ನಾವೇ ಅನಾರೋಗ್ಯಕ್ಕೆ ಆಹ್ವಾನ ನೀಡಿದಂತಾಗುತ್ತಂತೆ.
ಇನ್ನು ಇದರ ಜೊತೆಯಲ್ಲಿ ಮನೆಯಲ್ಲಿ ತುಂಬಾ ಹಳೆಯ ಪುಸ್ತಕ ಹಾಗೂ ಹರಿದು ಹೋದ ಪುಸ್ತಕಗಳನ್ನ ಇಡಲೇಬೇಡಿ. ಹಾಗೂ ಮನೆಯಲ್ಲಿ ಹೂಕುಂಡಗಳಿದ್ರೆ ಅದೂ ಸಹ ಒಡೆದು ಹೋಗಿದ್ದರೆ ಬದಲಾಯಿಸಿಬಿಡಿ. ಈ ರೀತಿ ಮಾಡೋದ್ರಿಂದ ನಿಮ್ಮ ಮನೆಯ ಸದಸ್ಯರು ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದೋಕೆ ಸಾಧ್ಯವಾಗುತ್ತೆ.