
ಸಮತೋಲಿತ ಹಾಗೂ ಆರೋಗ್ಯಕರ ಆಹಾರ ದೇಹಕ್ಕೆ ಬಹಳ ಒಳ್ಳೆಯದು. ಊಟದ ಜೊತೆ ತರಕಾರಿ, ಹಣ್ಣುಗಳನ್ನು ಸೇವನೆ ಮಾಡಬೇಕೆಂದು ಅನೇಕರು ಸಲಹೆ ನೀಡುತ್ತಾರೆ. ಹಣ್ಣು, ತರಕಾರಿ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ. ಆದ್ರೆ ಕೆಲವೊಂದು ಆಹಾರವನ್ನು ಎಂದೂ ಒಟ್ಟಿಗೆ ಸೇವನೆ ಮಾಡಬಾರದು.
ಬಾಳೆಹಣ್ಣಿನ ಜೊತೆ ಹಾಲು ಕುಡಿಯುವ ಪದ್ಧತಿ ನಮ್ಮಲ್ಲಿ ರೂಢಿಯಲ್ಲಿದೆ. ಆಯುರ್ವೇದದ ಪ್ರಕಾರ ಬಾಳೆಹಣ್ಣಿನ ಜೊತೆ ಹಾಲನ್ನು ಕುಡಿಯಬಾರದು. ಇದು ವಿಷವಾಗಿ ಮಾರ್ಪಡುತ್ತದೆ. ಬೆಳಗಿನ ಉಪಹಾರದ ಜೊತೆ ಬಾಳೆಹಣ್ಣು, ಹಾಲನ್ನು ಸೇವನೆ ಮಾಡಿದ್ರೆ ಇಡೀ ದಿನ ಸೋಮಾರಿತನ ನಿಮ್ಮನ್ನು ಕಾಡುತ್ತದೆ. ಆಲೋಚನೆ ಮಾಡುವ, ಅರ್ಥೈಸಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಬಾಳೆಹಣ್ಣು, ಹಾಲು ತುಂಬಾ ಇಷ್ಟವಾಗಿದ್ದರೆ ಬಾಳೆಹಣ್ಣನ್ನು ಬೇಯಿಸಿ ಏಲಕ್ಕಿ ಬೆರೆಸಿ ಸೇವನೆ ಮಾಡಿ.
ಊಟವಾದ ತಕ್ಷಣ ಹಣ್ಣುಗಳನ್ನು ತಿನ್ನಬಾರದು. ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಆದ್ರೆ ಆಹಾರದಲ್ಲಿರುವ ಕೊಬ್ಬು ಮತ್ತು ಪಿಷ್ಟ ಜೀರ್ಣವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಇದ್ರಿಂದ ಹಣ್ಣಿನಲ್ಲಿರುವ ಸಕ್ಕರೆ ಅಂಶ ಸುಲಭವಾಗಿ ಜೀರ್ಣವಾಗದೆ ಅನೇಕ ರೋಗಗಳು ಕಾಡುತ್ತವೆ.
ಹಣ್ಣಿನ ಜೊತೆ ಮೊಸರು ಸೇವನೆ ಒಳ್ಳೆಯದಲ್ಲ. ಇದು ಆಯಾಸ, ಅಲರ್ಜಿ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಜನರು ಇಂಥ ಅನೇಕ ಆಹಾರವನ್ನು ಒಟ್ಟಿಗೆ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡಿದ್ದಾರೆ. ಆದ್ರೆ ಅದು ಆರೋಗ್ಯವನ್ನು ಹಾಳು ಮಾಡುತ್ತದೆ.