ತರಕಾರಿ, ಹಣ್ಣಿನ ಜ್ಯೂಸ್ ತುಂಬಾ ಒಳ್ಳೆಯದು. ಜ್ಯೂಸ್ ಸೇವನೆ ಮಾಡಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಎಲ್ಲ ಸಮಯದಲ್ಲಿ ಜ್ಯೂಸ್ ಸೇವನೆ ಒಳ್ಳೆಯದಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು ಎಲ್ಲ ಹಣ್ಣಿನ ಜ್ಯೂಸ್ ಸೇವನೆ ಮಾಡಬಾರದು. ಜ್ಯೂಸ್ ಹಾಗೂ ಔಷಧಿ ಎರಡೂ ದೇಹ ಸೇರುವುದ್ರಿಂದ ಕೆಲವೊಂದು ಸಮಸ್ಯೆಗಳು ಕಾಡುವ ಸಾಧ್ಯತೆಯಿರುತ್ತದೆ.
ಸೇಬು ಜ್ಯೂಸ್: ಕ್ಯಾನ್ಸರ್ ನಿಂದ ಬಳಲುತ್ತಿರುವ, ಕಿಮೋಥೆರಪಿ ಮಾಡಿಸಿಕೊಳ್ಳುತ್ತಿರುವ ವ್ಯಕ್ತಿ ಸೇಬು ಹಣ್ಣಿನ ಜ್ಯೂಸ್ ಸೇವನೆ ಮಾಡಬಾರದು.
ಪೈನಾಪಲ್ ಜ್ಯೂಸ್: ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಯಿದ್ರೆ ಅಥವಾ ರಕ್ತಕ್ಕೆ ಸಂಬಂಧಿಸಿದ ಮಾತ್ರೆ ಸೇವನೆ ಮಾಡ್ತಿದ್ದರೆ ಪೈನಾಪಲ್ ಜ್ಯೂಸ್ ಸೇವನೆ ಮಾಡಬಾರದು. ಪೈನಾಪಲ್ ನಲ್ಲಿರುವ ಬ್ರೊಮೆಲಿನ್ ಅಂಶ ರಕ್ತಕ್ಕೆ ಸಂಬಂಧಿಸಿದ ಔಷಧಿ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಪೊಮೆಲೋ ಜ್ಯೂಸ್: ಈ ಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಪ್ರಮಾಣ ಹೆಚ್ಚಿರುತ್ತದೆ. ಸಕ್ಕರೆ ಪ್ರಮಾಣ ಕಡಿಮೆಯಿರುತ್ತದೆ. ಕೊಲೆಸ್ಟ್ರಾಲ್, ಹೈ ಬ್ಲಡ್ ಪ್ರೆಶರ್ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಜ್ಯೂಸ್ ಸೇವನೆ ಮಾಡಬಾರದು.