ಶ್ರಾವಣ ಮಾಸ ಶುರುವಾಗಿದೆ. ಭಕ್ತರು ಈಶ್ವರನ ಆರಾಧನೆಯಲ್ಲಿ ನಿರತರಾಗಿದ್ದಾರೆ. ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವಿದೆ. ಶ್ರಾವಣ ಮಾಸದಲ್ಲಿ ಮಾಡುವ ವೃತ, ಉಪವಾಸ ದೇವರನ್ನು ಒಲಿಸಿಕೊಳ್ಳಲು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಶ್ರಾವಣ ಮಾಸದಲ್ಲಿ ಶಿವನ ವಿಶೇಷ ಅನುಗ್ರಹವಿರುತ್ತದೆ. ಹಾಗಾಗಿ ಎಲ್ಲ ದುಃಖ, ಅನಾರೋಗ್ಯ ದೂರವಾಗುತ್ತದೆ.
ನಿಮ್ಮ ಆರೋಗ್ಯ ಸದಾ ಹದಗೆಡುತ್ತಿದ್ದು, ಹಳೆ ರೋಗವೊಂದು ನಿಮ್ಮ ಜೀವ ಹಿಂಡುತ್ತಿದ್ದರೆ ರೋಗಕ್ಕೆ ಅನುಗುಣವಾಗಿ ಶಿವನಿಗೆ ಕೆಲವೊಂದು ವಿಶೇಷ ವಸ್ತುಗಳನ್ನು ಅರ್ಪಿಸಿ.
ಇದ್ರಿಂದ ಮಾನಸಿಕ, ದೈಹಿಕ ರೋಗ ದೂರವಾಗುತ್ತದೆ. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗ್ತಿದ್ದು, ವೈದ್ಯರ ಔಷಧಿ ನಾಟುತ್ತಿಲ್ಲವೆಂದಾದ್ರೆ ವೈದ್ಯರ ಔಷಧಿ ಸೇವನೆ ಜೊತೆ ಶ್ರಾವಣ ಮಾಸದಲ್ಲಿ ಕಶಾ (ಒಂದು ರೀತಿಯ ಹುಲ್ಲು) ವನ್ನು ಗಂಗಾಜಲದಲ್ಲಿ ಅದ್ದಿ ಶಿವಲಿಂಗಕ್ಕೆ ಅರ್ಪಿಸಿ. ನಂತ್ರ ಕಣ್ಣು ಮುಚ್ಚಿ, ಕೈ ಮುಗಿದು ರೋಗ ನಿವಾರಣೆಗೆ ಪ್ರಾರ್ಥಿಸಿ.
ಮಕ್ಕಳಾಗದಂತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಬಿದಿರಿನ ಹಸಿ ಎಲೆಯನ್ನು ಪುಡಿಮಾಡಿ ಹಾಲಿನಲ್ಲಿ ಬೆರೆಸಿ ಈ ಮಿಶ್ರಣವನ್ನು ಶಿವಲಿಂಗಕ್ಕೆ ಅರ್ಪಿಸಿ. ಶೀಘ್ರವೇ ಸಂತಾನ ಪ್ರಾಪ್ತಿಯಾಗಲಿದೆ.