ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಧೂಮಪಾನ ಯಾವಾಗ ಮಾಡಿದ್ರೂ ಆರೋಗ್ಯಕ್ಕೆ ಹಾನಿಕರ. ಅದ್ರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಧೂಮಪಾನ ಮಾಡಿದ್ರೆ ಮತ್ತಷ್ಟು ಅಪಾಯ. ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ಯಾರ ಬಳಿಯೂ ಗಲಾಟೆ-ಜಗಳ ಮಾಡಬಾರದು. ದಿನದ ಆರಂಭ ಸಕಾರಾತ್ಮಕವಾಗಿರಬೇಕು. ನಗು ಮುಖದಲ್ಲಿ ದಿನವನ್ನು ಸ್ವಾಗತ ಮಾಡಬೇಕು. ಕೋಪ, ಒತ್ತಡದಲ್ಲಿ ದಿನ ಶುರು ಮಾಡಿದ್ರೆ ಇಡೀ ದಿನ ಒಂದಿಲ್ಲೊಂದು ಕಿರಿಕಿರಿ ಕಾಡುತ್ತಿರುತ್ತದೆ.
ಬೆಳಿಗ್ಗೆ ಮಸಾಲೆ ಪದಾರ್ಥಗಳಿಂದ ದೂರವಿರುವುದು ಒಳಿತು. ಬೆಳಿಗ್ಗೆ ಸಾಧ್ಯವಾದಷ್ಟು ಪೌಷ್ಠಿಕ ಆಹಾರವನ್ನು ತಿನ್ನಬೇಕು.
ಬಹುತೇಕರು ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುತ್ತಾರೆ. ವಿಜ್ಞಾನಿಗಳ ಪ್ರಕಾರ ಇದು ಒಳ್ಳೆಯದಲ್ಲ. ಆಹಾರ ಸೇವನೆ ಮಾಡಿದ ನಂತ್ರ ದಿನದ ಕೆಲಸ ಶುರುವಾದ ಮೇಲೆ ಕಾಫಿ ಕುಡಿಯುವುದು ಸೂಕ್ತ.
ಕೆಲವರು ಬೆಳಿಗ್ಗೆ ಬೇಗ ಏನೋ ಏಳ್ತಾರೆ. ಆದ್ರೆ ಎದ್ದು ಕೆಲಸ ಶುರು ಮಾಡುವ ಬದಲು ಮನೆಯ ಖುರ್ಚಿ ಮೇಲೆ, ಮಂಚದ ಮೇಲೆ ಮತ್ತೆ ಮಲಗ್ತಾರೆ. ಇದು ಇಡೀ ದಿನದ ಕಿರಿಕಿರಿಗೆ ಕಾರಣವಾಗುತ್ತೆ.