ದಿನಪೂರ್ತಿ ಕೆಲಸ ಮಾಡಿ ರಾತ್ರಿ ಹಾಸಿಗೆ ಮೇಲೆ ಬಂದ್ರೆ ಹಿತವೆನಿಸುತ್ತದೆ. ಮಲಗಿದ ತಕ್ಷಣ ನಿದ್ರೆ ಬಂದ್ರಂತೂ ಮರುದಿನ ಫ್ರೆಶ್ ಆಗಿ ಏಳಬಹುದು.
ಕೆಲವೊಮ್ಮೆ ನಾವು ಮಲಗುವ ಹಾಸಿಗೆ ಹಾಗೂ ದಿಂಬು ನಮ್ಮ ಶತ್ರುವಾಗುತ್ತದೆ. ಇಡೀ ದಿನ ಆರೋಗ್ಯವಾಗಿದ್ದವರು ಮಲಗೇಳುವ ಹೊತ್ತಿಗೆ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಅದಕ್ಕೆ ಕಾರಣ ದಿಂಬು.
ಪ್ರತಿನಿತ್ಯ ನಾವು ಬಳಸುವ ದಿಂಬಿನ ಬಗ್ಗೆ ಅನೇಕರಿಗೆ ತಿಳಿದಿಲ್ಲ. ದಿಂಬು ಸ್ವಚ್ಛವಾಗಿರಬೇಕು. ವಾರಕ್ಕೆ ಎರಡು ಬಾರಿಯಾದ್ರೂ ದಿಂಬಿನ ಕವರ್ ತೆಗೆದು ಸ್ವಚ್ಛಗೊಳಿಸಬೇಕು. ಯಾಕೆಂದ್ರೆ ಸಾಂಕ್ರಾಮಿಕ ರೋಗವನ್ನು ಹರಡೋದ್ರಲ್ಲಿ ದಿಂಬು ಬಹುಮುಖ್ಯ ಪಾತ್ರ ವಹಿಸುತ್ತದೆ.
ಅನೇಕರು ದಿಂಬನ್ನು ಮುಖಕ್ಕೆ ಒತ್ತಿ ಮಲಗ್ತಾರೆ. ಇದು ಮೊಡವೆಗೆ ಕಾರಣವಾಗುತ್ತದೆ. ದಿಂಬು ಹಾಗೂ ಮುಖ ರಾತ್ರಿ ಪೂರ್ತಿ ಒತ್ತಿಕೊಂಡಿರುವುದ್ರಿಂದ ದಿಂಬಿನಲ್ಲಿರುವ ಧೂಳು ಮುಖದ ಚರ್ಮಕ್ಕೆ ಸೇರಿ ಮೊಡವೆ ಶುರುವಾಗುತ್ತದೆ.
ಇದೊಂದೇ ಅಲ್ಲ ದಿಂಬಿನಲ್ಲಿರುವ ಧೂಳು ಅಲರ್ಜಿಗೆ ಕಾರಣವಾಗುತ್ತದೆ. ಅಸ್ತಮಾದಂತ ಗಂಭೀರ ರೋಗಕ್ಕೂ ಇದು ಕಾರಣವಾಗುತ್ತದೆ. ದಿಂಬಿನಲ್ಲಿರುವ ಧೂಳು ಬ್ಯಾಕ್ಟಿರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ. ಇದ್ರ ಸಂಪರ್ಕಕ್ಕೆ ಬರುವ ವ್ಯಕ್ತಿಯ ಮೂಗು ಹಾಗೂ ಬಾಯಿ ಮೂಲಕ ದೇಹದೊಳಕ್ಕೆ ಹೋಗುತ್ತದೆ. ಈ ಎಲ್ಲ ಸಮಸ್ಯೆಯಿಂದ ಮುಕ್ತಿ ಪಡೆಯಬೇಕಾದಲ್ಲಿ ಸೂಕ್ತ ಸಮಯಕ್ಕೆ ದಿಂಬನ್ನು ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿ.