alex Certify ಅನಧಿಕೃತ ಕ್ರಷರ್ ಹೊಂದಿರುವವರಿಗೆ ಗುಡ್ ನ್ಯೂಸ್; ಸಕ್ರಮಗೊಳಿಸಲು ಮುಂದಾದ ರಾಜ್ಯ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಧಿಕೃತ ಕ್ರಷರ್ ಹೊಂದಿರುವವರಿಗೆ ಗುಡ್ ನ್ಯೂಸ್; ಸಕ್ರಮಗೊಳಿಸಲು ಮುಂದಾದ ರಾಜ್ಯ ಸರ್ಕಾರ

ಅನಧಿಕೃತ ಜಲ್ಲಿ ಕ್ರಷರ್ ಹೊಂದಿರುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಲು ಮುಂದಾಗಿದೆ. ಇವುಗಳಿಗೆ ವಿಧಿಸಲಾಗಿದ್ದ ಕಠಿಣ ನಿರ್ಬಂಧಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಹೀಗಾಗಿ ಇಂತಹ ಕ್ರಷರ್ ಗಳು ಸಕ್ರಮವಾಗಲು ಹಾದಿ ಸುಗಮವಾದಂತಾಗಲಿದೆ.

ಶುಕ್ರವಾರದಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ರಾಜ್ಯದಲ್ಲಿ ವಾರ್ಷಿಕ 45 ದಶಲಕ್ಷ ಟನ್ ಮರಳಿಗೆ ಬೇಡಿಕೆಯಿದ್ದು, ಈ ಪೈಕಿ 35 ದಶ ಲಕ್ಷ ಟನ್ ಮರಳನ್ನು ಎಂ ಸ್ಯಾಂಡ್ ಪೂರೈಸುತ್ತಿದೆ ಎಂದರು.

ಆದರೆ ಕ್ರಷರ್ ಗಳ ಕಾರ್ಯನಿರ್ವಹಣೆಗೆ ಸದ್ಯ ಕಠಿಣ ನಿರ್ಬಂಧಗಳು ಇರುವ ಕಾರಣ ಎಂ ಸ್ಯಾಂಡ್ ಪೂರೈಕೆಗೆ ಅಡಚಣೆಯಾಗಿದೆ. ಹೀಗಾಗಿ ನಿಯಮಗಳ ಸರಳೀಕರಣ ಕುರಿತಂತೆ ಸದ್ಯದಲ್ಲೇ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...