alex Certify ಅನಗತ್ಯ ಕೂದಲ ನಿವಾರಣೆಗೆ ಇಲ್ಲಿವೆ ವಿವಿಧ ವಿಧಾನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಗತ್ಯ ಕೂದಲ ನಿವಾರಣೆಗೆ ಇಲ್ಲಿವೆ ವಿವಿಧ ವಿಧಾನಗಳು

ಮಹಿಳೆಯರು ಹೆಚ್ಚಾಗಿ ತಮ್ಮ ಕೈಕಾಲಿನಲ್ಲಿ ಕಂಡುಬರುವ ಅನಗತ್ಯ ಕೂದಲುಗಳನ್ನು ನಿವಾರಣೆ ಮಾಡುತ್ತಾರೆ. ಇದರಿಂದ ಅವರ ಕೈಕಾಲಿನ ಅಂದ ಹೆಚ್ಚುತ್ತದೆ. ಈ ಅನಗತ್ಯ ಕೂದಲನ್ನು ನಿವಾರಣೆ ಮಾಡಲು ಹಲವು ವಿಧಾನಗಳಿವೆ. ಅವು ಯಾವುವು? ಅದರಲ್ಲಿ ನಿಮಗೆ ಯಾವುದು ಸುರಕ್ಷಿತ ಎಂದು ತಿಳಿಯಿರಿ.

*ಶೇವಿಂಗ್ : ಮಹಿಳೆಯರಿಗೆ ಕೂದಲು ತೆಗೆಯುವ ವಿಧಾನಗಳಲ್ಲಿ ಶೇವಿಂಗ್ ತ್ವರಿತ, ಸುಲಭ ಮತ್ತು ನೋವು ರಹಿತವಾದ ವಿಧಾನವಾಗಿದೆ. ಆದರೆ ಇದರಿಂದ ಸುಡುವಿಕೆ, ಚರ್ಮದ ಕಿರಿಕಿರಿ ಉಂಟಾಗುತ್ತದೆ. ಹಾಗೇ ವಾರದಲ್ಲಿ 3 ಬಾರಿ ಮಾಡಬೇಕಾಗುತ್ತದೆ.

*ವ್ಯಾಕ್ಸಿಂಗ್ : ಇದು ಮೇಣವನ್ನು ಕೂದಲಿರುವ ಸ್ಥಳಕ್ಕೆ ಹಚ್ಚಿ ಪಟ್ಟಿಗಳಿಂದ ಅದಕ್ಕೆ ಅಂಟಿಸಿ ಕಿತ್ತು ತೆಗೆಯುವುದು. ಇದು ನೋವಿನ ಪ್ರಕ್ರಿಯೆಯಾಗಿದೆ. ಇದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಇದರಿಂದ ಚರ್ಮ ಕೆಂಪಾಗುತ್ತದೆ.

*ಥ್ರೆಡ್ಡಿಂಗ್ : ದಾರಗಳಿಂದ ಕೂದಲನ್ನು ಕಿತ್ತು ತೆಗೆಯುವ ವಿಧಾನವಾಗಿದೆ. ಇದನ್ನು ಸರಿಯಾಗಿ ಮಾಡಿದರೆ ಚರ್ಮಕ್ಕೆ ಹಾನಿಯಿಲ್ಲ, ಆದರೆ ಸರಿಯಾಗಿ ಮಾಡದಿದ್ದರೆ ಮಾತ್ರ ನೋವು, ಹಾಗೂ ಚರ್ಮಕ್ಕೆ ಗಾಯವಾಗಬಹುದು. ಇದನ್ನು ಹೆಚ್ಚಾಗಿ ತುಟಿಮೇಲಿನ, ಗಲ್ಲ, ಹುಬ್ಬುಗಳ ಕೂದಲನ್ನು ತೆಗೆಯಲು ಬಳಸುತ್ತಾರೆ.

*ಎಲೆಕ್ಟ್ರಾನಿಕ್ಸ್ ಸಾಧನ ಬಳಕೆ: ಇದು ಶಾಶ್ವತವಾಗಿ ಕೂದಲನ್ನು ತೆಗೆಯುವ ವಿಧಾನ. ಇದನ್ನು ನೀವು ತಜ್ಞರ ಸಹಾಯದಿಂದ ಮಾಡಬೇಕು. ಇದು ತುಂಬಾ ದುಬಾರಿ ವಿಧಾನವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...