alex Certify ಅಧಿವೇಶನದಲ್ಲೂ ಪವರ್ ಸ್ಟಾರ್ ನೆನೆದ ಸಿಎಂ; ಹೀಗಾಗುತ್ತೆ ಎಂದು ಊಹಿಸಿರಲಿಲ್ಲ; ನೆನಪು ಮೆಲುಕು ಹಾಕಿದ ಬೊಮ್ಮಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿವೇಶನದಲ್ಲೂ ಪವರ್ ಸ್ಟಾರ್ ನೆನೆದ ಸಿಎಂ; ಹೀಗಾಗುತ್ತೆ ಎಂದು ಊಹಿಸಿರಲಿಲ್ಲ; ನೆನಪು ಮೆಲುಕು ಹಾಕಿದ ಬೊಮ್ಮಾಯಿ

ಬೆಳಗಾವಿ: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅವರನ್ನು ನೆನೆದ ಸಿಎಂ ಬಸವರಾಜ್ ಬೊಮ್ಮಾಯಿ ಅಂದು ಬೆಳಿಗ್ಗೆ ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಪುನೀತ್ ಅವರಿಗೆ ಹೀಗಾಗುತ್ತೆ ಎಂದು ಯಾರೂ ಊಹಿಸಿರಲಿಲ್ಲ ಎಂದು ದುಃಖ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಸಿಎಂ, ಪುನೀತ್ ರಾಜ್ ಕುಮಾರ್ ನಿಧನದ ದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿದರು. ಅಂದು ಪುನೀತ್ ಗೆ ಹೀಗಾಗುತ್ತೆ ಎಂದು ಯಾರಿಗೂ ಅನಿಸಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಹೋಗುವುದಕ್ಕೂ ಮುನ್ನ ಅವರು ವಿಧಿವಶರಾಗಿದ್ದರು. ತಕ್ಷಣ ಅವರ ಕುಟುಂಬದ ಜತೆ ಮಾತನಾಡಿ ಸಹಕಾರ ಕೋರಿದೆವು. ಡಾ.ರಾಜ್ ಅವರ ಅಂತ್ಯಸಂಸ್ಕಾರದ ವೇಳೆ ನಡೆದ ಅಹಿತಕರ ಘಟನೆಗಳು ಮತ್ತೆ ಸಂಭವಿಸಬಾರದು ಎಂಬುದು ನಮ್ಮ ಉದ್ದೇಶವಾಗಿತ್ತು. ಅದಕ್ಕೆ ಪುನೀತ್ ಕುಟುಂಬದ ಸಹಕಾರ ಸಿಕ್ಕಿತು ಎಂದು ಹೇಳಿದರು.

ಸಯಾಮಿ ಅವಳಿಗಳನ್ನು ಬೇರ್ಪಡಿಸಲು ಮ್ಯಾರಾಥಾನ್ ಸರ್ಜರಿ

ಈಗಾಗಲೇ ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ನೀಡುವ ದಿನಾಂಕವನ್ನು ಶೀಘ್ರವೇ ಘೋಷಿಸುತ್ತೇವೆ. ಪ್ರಶಸ್ತಿ ದಿನಾಂಕವಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ಹೆಸರನ್ನು ಶಿಫಾರಸು ಮಾಡಲಾಗುವುದು ಎಂದರು.

ಪುನೀತ್ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ ನೋಡಿ ಅಚ್ಚರಿಯಾಯಿತು. ಅಲ್ಪ ಸಮಯದಲ್ಲಿ ಒಬ್ಬ ನಟ ಇಷ್ಟು ಜನರ ಹೃದಯದಲ್ಲಿ ಸ್ಥಾನಗಳಿಸಬಲ್ಲ ಎಂಬುದು ಸಾವಿನ ಬಳಿಕ ತಿಳಿಯಿತು. ಪುನೀತ್ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ ಅದರಾಚೆಗೂ ಅನೇಕ ರೀತಿಯ ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡಿದ್ದವರು. ಚಿಕ್ಕಂದಿನಿಂದಲೂ ಪುನೀತ್ ಅವರನ್ನು ನಾನು ಬಲ್ಲೆ. ಅವರಿಗೆ ನಾನೊಂದು ಪ್ರಶ್ನೆ ಕೇಳಿದ್ದೆ. ನಟನೆ ಇಷ್ಟು ಸರಳವಾಗಿ ಬಂದಿದ್ದು ಹೇಗೆ? ಎಂದು ತಮಗದು ಸಹಜವಾಗಿ ಬಂದಿದೆ ಅಂತ ಪುನೀತ್ ಹೇಳಿದ್ದರು ಎಂದು ಪುನೀತ್ ರಾಜ್ ಕುಮಾರ್ ಅವರೊಂದಿಗಿನ ಒಡನಾಟದ ಬಗ್ಗೆ ಸಿಎಂ ನೆನಪಿಸಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...