
ಅಧಿಕ ರಕ್ತದೊತ್ತಡದ ಸಮಸ್ಯೆ ಇರುವ ರೋಗಿಗಳು ವ್ಯಾಯಾಮದ ಸಮಯದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಎಲ್ಲಾ ವ್ಯಾಯಾಮಗಳನ್ನು ಮಾಡುವುದು ಅಪಾಯಕಾರಿ. ತಪ್ಪಾದ ವ್ಯಾಯಾಮವು ಅನೇಕ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು. ದೇಹದ ರಕ್ತದೊತ್ತಡ ಮತ್ತಷ್ಟು ಹೆಚ್ಚಾಗಬಹುದು.
ಅಧಿಕ ರಕ್ತದೊತ್ತಡ ರೋಗಿಗಳು ಯಾವ ವ್ಯಾಯಾಮವನ್ನು ಮಾಡಬಾರದು ಅನ್ನೋದನ್ನು ನೋಡೋಣ. ರನ್ನಿಂಗ್, ಫಿಟ್ನೆಸ್‌ಗೆ ಅತ್ಯಂತ ಪ್ರಯೋಜನಕಾರಿ. ಆದರೆ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ರನ್ನಿಂಗ್ ಮಾಡಬಾರದು. ಇದರಿಂದ ಹೃದಯಕ್ಕೆ ತೊಂದರೆಯಾಗುತ್ತದೆ.
ಅಧಿಕ ರಕ್ತದೊತ್ತಡ ಇರುವ ರೋಗಿಗಳು ವೇಯ್ಟ್ ಲಿಫ್ಟಿಂಗ್‌ನಿಂದಲೂ ದೂರವಿರಬೇಕು. ಅತಿಯಾದ ಭಾರ ಎತ್ತುವ ವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗಬಹುದು.ಡೆಡ್‌ಲಿಫ್ಟ್ ಕೂಡ ಅಪಾಯಕಾರಿ. ನೆಲದಿಂದ ಭಾರವನ್ನು ಎತ್ತುವ ಮೂಲಕ ಶಕ್ತಿಗೇ ಸವಾಲು ಹಾಕುತ್ತಾರೆ. ಇದರಿಂದ್ಲೂ ಬಿಪಿ ಜಾಸ್ತಿಯಾಗುವ ಸಾಧ್ಯತೆ ಇರುತ್ತದೆ.
ಎದೆಯ ಮೇಲಿರುವ ಸ್ನಾಯುಗಳಿಗೆ ಬೆಂಚ್ ಪ್ರೆಸ್ ವ್ಯಾಯಾಮವನ್ನು ಮಾಡಲಾಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಈ ವ್ಯಾಯಾಮವನ್ನು ಮಾಡಬಾರದು.ಬಾರ್ಬೆಲ್ ಸ್ಕ್ವಾಟ್ ವ್ಯಾಯಾಮವು ಶಕ್ತಿಯನ್ನು ಹೆಚ್ಚಿಸಲು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಈ ವ್ಯಾಯಾಮವನ್ನು ಮಾಡದೇ ಇರುವುದು ಉತ್ತಮ.