ವೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಗೆ ತನ್ನ ಹೊಸ ಉತ್ಪನ್ನ ಸೆಡಾನ್ ವರ್ಟಸ್ನ್ನು ಇತ್ತೀಚಿಗೆ ಲಾಂಚ್ ಮಾಡುವ ಬಗ್ಗೆ ಮಾಹಿತಿ ನೀಡಿದೆ. ವೋಕ್ಸ್‌ವ್ಯಾಗನ್ 2.0 ಸ್ಟ್ರಾಟರ್ಜಿ ಅಡಿಯಲ್ಲಿ ವರ್ಟಸ್ ಎರಡನೇ ಉತ್ಪನ್ನವಾಗಿದೆ. ಮೊದಲ ಉತ್ಪನ್ನ ಟೈಗುನ್ ಕ್ಯಾಂಪ್ಯಾಕ್ಟ್ ಎಸ್‌ಯುವಿ ಆಗಿತ್ತು. ವೋಕ್ಸ್‌ವ್ಯಾಗನ್ ವರ್ಟಸ್‌ನ ಬೆಲೆ ಸೇರಿದಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದೆ.
ಸ್ಕೋಡಾ ಸ್ಲಾವಿಯಾ, ವೋಕ್ಸ್‌ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ಎಸ್‌ಯುವಿ ಅದೇ ವೇದಿಕೆಯಲ್ಲಿ. ಉತ್ಪಾದನೆ ಮತ್ತು ಮುಂಗಡ ಬುಕಿಂಗ್ ಪ್ರಾರಂಭವಾಗಿರುವುದರಿಂದ ವರ್ಟಸ್‌ನ ಬಿಡುಗಡೆಯು ಮುಂಬರುವ ತಿಂಗಳುಗಳಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಆನ್‌ಲೈನ್‌ನಲ್ಲಿ ಈಗಾಗಲೇ ವರ್ಟಸ್‌ನ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿದೆ.
ಈ ವಿಡಿಯೋವನ್ನು ದಿ ಫ್ಯಾಟ್ ಬೈಕರ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ವಿಡಿಯೊವು ಹೆದ್ದಾರಿಯಲ್ಲಿ ಫೋಕ್ಸ್‌ವ್ಯಾಗನ್ ವರ್ಟಸ್ ಸೆಡಾನ್ ಅನ್ನು ತೋರಿಸುತ್ತದೆ. ಕಾರು ತಾತ್ಕಾಲಿಕ ನಂಬರ್ ಪ್ಲೇಟ್ ಅನ್ನು ಹೊಂದಿದ್ದು, ಇದುವರೆಗೆ ನಮಗೆ ತೋರಿಸಿದ್ದಕ್ಕಿಂತ ಭಿನ್ನವಾಗಿ ಕಾಣುತ್ತದೆ.
ಇದು ಸೀಮಿತ ಸಂಖ್ಯೆಯ ವೈಶಿಷ್ಟ್ಯಗಳೊಂದಿಗೆ ಬರುವ ಮಿಡ್-ಸ್ಪೆಕ್ ರೂಪಾಂತರವಾಗಿದೆ. ಹೆಚ್ಚಿನ ಅಥವಾ ಟಾಪ್-ಎಂಡ್ ರೂಪಾಂತರಕ್ಕೆ ಹೋಲಿಸಿದರೆ, ಫೋಕ್ಸ್‌ವ್ಯಾಗನ್ ವರ್ಟಸ್ ಮಿಡ್ ವೆರಿಯಂಟ್ ವಿಭಿನ್ನವಾಗಿ ಕಾಣುವ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.