ನಟಿ ನಯನತಾರಾ ನಿರ್ದೇಶಕ ವಿಜ್ಞೇಶ್ ಶಿವನ್ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಕಳೆದ ಆರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇಂದು ಕುಟುಂಬ ಸದಸ್ಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.
ವಿವಾಹದ ಮೊದಲ ಫೋಟೋವನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದು, ಅದಕ್ಕೆ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ. ವಿವಾಹ ಸಂದರ್ಭದಲ್ಲಿ ಕೆಲ ನಟ-ನಟಿಯರು ಸಹ ಹಾಜರಿದ್ದರು ಎನ್ನಲಾಗಿದೆ.
ನವಜೋಡಿ, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರಿಗೆ ಅದ್ದೂರಿ ಆರತಕ್ಷತೆ ಸಮಾರಂಭವನ್ನು ಏರ್ಪಡಿಸಿದ್ದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಹ ಹಾಜರಿರಲಿದ್ದಾರೆ ಎನ್ನಲಾಗಿದೆ.