ಮೈಸೂರು: ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರವಾಗಿ ರೋಹಿಣಿ ಸಿಂಧೂರಿ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಜೆಡಿಎಸ್ ಶಾಸಕ ಸಾ.ರಾ.ಮಹೇಶ್, ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಸರ್ಕಾರದ ತಪ್ಪು, ಅವರನ್ನು ಅಮಾನತು ಮಾಡಬೇಕಿತ್ತು ಎಂದು ಆಗ್ರಹಿಸಿದ್ದಾರೆ.
ಅನ್ ಲಾಕ್ ಗೆ ಸಿದ್ಧತೆ: ಬೆಂಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆಗೆ ಕೌಂಟ್ ಡೌನ್
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್, ಭೂ ಹಗರಣದ ಬಗ್ಗೆ ಮಾತನಾಡಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದಿದ್ದ ರೋಹಿಣಿ ಸಿಂಧೂರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಭೂ ಹಗರಣದ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಅದನ್ನು ಸಿಎಂ ಗೆ ನೀಡಿ ತನಿಖೆಗೆ ಒತ್ತಾಯಿಸಿ. ಅದನ್ನು ಬಿಟ್ಟು ಸಲ್ಲದ ಆರೋಪ ಮಾಡಿ ಕಳಂಕ ತರಬೇಡಿ. ರೋಹಿಣಿ ಸಿಂಧೂರಿಯಂತಹ ಪ್ರಚಾರಪ್ರಿಯ ಜಿಲ್ಲಾಧಿಕಾರಿಯನ್ನು ನಾನು ಎಲ್ಲಿಯೂ ನೋಡಿಲ್ಲ. ಈಗ ಸಿನಿಮಾ ಬೇರೆ ಮಾಡುತ್ತಾರಂತೆ. ಆಂಧ್ರದ ಕೆಲ ಐಎಎಸ್ ಅಧಿಕಾರಿಗಳ ಕುಮ್ಮಕ್ಕಿನಿಂದ ರೋಹಿಣಿ ಸಿಂಧೂರಿ ಹೀಗೆ ನಡೆದುಕೊಳ್ಳುತ್ತಿದ್ದಾರೆ. ರೋಹಿಣಿ ವಿರುದ್ಧ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕೊರೊನಾ ‘ಲಸಿಕೆ’ ಪ್ರಮಾಣ ಪತ್ರದಲ್ಲಾದ ತಪ್ಪನ್ನು ಸರಿಪಡಿಸಲು ಇಲ್ಲಿದೆ ಮಾಹಿತಿ
ಕ್ಯಾಬಿನೆಟ್ ಸಚಿವರ ನಿವಾಸ ನವೀಕರಣಕ್ಕೆ ಕೇವಲ 2 ಲಕ್ಷ ಅನುದಾನ ನೀಡಲಾಗುತ್ತೆ. ಆದ್ರೆ ಡಿಸಿ ಮನೆಯಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ಸ್ವಿಮಿಂಗ್ ಪೂಲ್, ಜಿಮ್ ನಿರ್ಮಿಸಲಾಗುತ್ತೆ. ಈ ಹಣ ಖರ್ಚು ಮಾಡಲು ಅಧಿಕಾರ ಕೊಟ್ಟಿದ್ದು ಯಾರು? ಯಾವುದೇ ಮಂತ್ರಿಗಳ ಮನೆಯಲ್ಲೂ ಬಾರದಷ್ಟು ವಿದ್ಯುತ್ ಬಿಲ್ ಡಿಸಿ ರೋಹಿಣಿ ಮನೆಗೆ ಬರುತ್ತದೆ. ಮೇ ತಿಂಗಳಲ್ಲು 42,371 ರೂಪಾಯಿ, ಜೂನ್ ತಿಂಗಳಲ್ಲಿ 36,406 ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಇದು ಖಡಕ್ ಸಿಂಗಂ ಆಫೀಸರ್ ಮಾಡುವ ಕೆಲಸವೇ ಎಂದು ಪ್ರಶ್ನಿಸಿದ್ದಾರೆ.