ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ್ ಬೊಮ್ಮಾಯಿ ಮೊದಲ ಸಭೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಖರ್ಚು ಕಡಿಮೆ ಮಾಡಿ, ನಿಗದಿತ ಸಮಯದೊಳಗೆ ಯೋಜನೆಗಳು ಅನುಷ್ಠಾನಕ್ಕೆ ತರುವಂತೆ ಸೂಚಿಸಿದ್ದಾರೆ.
ಅಧಿಕಾರಿಗಳ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಬೊಮ್ಮಾಯಿ, ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ಸರ್ಕಾರದ ಉದ್ದೇಶ. ಇಲಾಖೆ ಸಂಪೂರ್ಣ ಜವಾಬ್ದಾರಿ ಅಧಿಕಾರಿಗಳದ್ದು, ಸಮಯಕ್ಕೆ ಸರಿಯಾಗಿ ಯೋಜನೆ ಜಾರಿಯಾಗಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದರು.
BIG NEWS: ಸೂಪರ್ ಸಿಎಂ ಟ್ಯಾಗ್ ನಿಂದ ಹೊರ ಬಂದಿದ್ದಕ್ಕೆ ಖುಷಿಯಾಗಿದೆ ಎಂದ ಬಿ.ವೈ. ವಿಜಯೇಂದ್ರ
ಎಲ್ಲಾ ಇಲಾಖೆಗಳ ಜೊತೆ ಪರಸ್ಪರ ಉತ್ತಮ ಸಹಕಾರವಿರಬೇಕು. ಟೀಂ ವರ್ಕ್ ಆಗಿ ಕೆಲಸ ಮಾಡಬೇಕು ನಾನೂ ಕೂಡ ನಿಮ್ಮ ತಂಡದ ಓರ್ವ ಸದಸ್ಯನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಮೆಟ್ರೋ ಲೆವಲ್ ನಲ್ಲಿ ಮಾತ್ರವಲ್ಲ ಮೈಕ್ರೋ ಲೆವಲ್ ನಲ್ಲಿ ಕೆಲಸಗಳು ನಡೆಯಬೇಕು. 5 ಪರ್ಸೆಂಟ್ ನಷ್ಟು ಅನಗತ್ಯ ಖರ್ಚು ಕಡಿಮೆ ಮಾಡಿ 15 ದಿನಗಳೊಳಗಾಗಿ ಎಲ್ಲಾ ಇಲಾಖೆ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು. ಫೈಲ್ ಕ್ಲಿಯರನ್ಸ್ ಡ್ರೈವ್ ಮಾಡಲು ನಿರ್ಧರಿಸಿದ್ದು, 15ದಿನಗಳಲ್ಲಿ ಕ್ಲಿಯರ್ ಆಗಲಿದೆ ಎಂದು ಹೇಳಿದರು.