ಬೆಂಗಳೂರು: ‘ಕೈ’ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ಸುಟ್ಟು ಹಾಕ್ತೇವೆ ಎಂಬ ಮಾಜಿ ಸಚಿವ ಹೆಚ್.ಆಂಜನೇಯ ಹೇಳಿಕೆಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಅಧಿಕಾರಕ್ಕೆ ಬಂದ್ರೆ ತಾನೆ ಕಾಯ್ದೆ ಸುಟ್ಟು ಹಾಕುವುದು…? ಎಂದು ಲೇವಡಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ಅವರು ಅಧಿಕಾರದಲ್ಲಿದ್ದಾಗ ಏನೂ ಮಾಡಲಾಗಲಿಲ್ಲ. ಅಧಿಕಾರ ಇಲ್ಲದಿದ್ದಾಗ ಬಡಾಯಿ ಕೊಚ್ಚಿಕೊಳ್ತಿದ್ದಾರೆ ಅಷ್ಟೆ. ಅಧಿಕಾರಕ್ಕೆ ಬಂದ್ರೆ ಅವರೆಲ್ಲರೂ ಸೈಲೆಂಟ್ ಆಗ್ತಾರೆ. ಕಾಯ್ದೆ ತಿರುಳನ್ನು ಮೊದಲು ಅವರು ಅರ್ಥ ಮಾಡಿಕೊಳ್ಳಲಿ ಎಂದರು.
‘ಬಿಗ್ ಬಾಸ್’ ಸ್ಪರ್ಧಿ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ್ದ 5 ಮಂದಿ ಅರೆಸ್ಟ್
ಪಾಕ್ ನಲ್ಲಿ ಮೊದಲು ಹಿಂದೂ, ಸಿಖ್ಖರು 20% ಇದ್ದು ಈಗ 3% ಬಂದಿದ್ದಾರೆ. ಅವರು ಅಲ್ಲಿ ಅಲ್ಪಸಂಖ್ಯಾತರು. ಈ ಬಗ್ಗೆ ಮೊದಲು ಕಾಂಗ್ರೆಸ್ ನಾಯಕರು ತಿಳಿದುಕೊಳ್ಳಲಿ ಎಂದು ಹೇಳಿದರು.