ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಾಗಿವೆ. ಮೊದಲ ಅವಧಿಯಲ್ಲಿ ಹೆಚ್ಚಿನ ಸವಾಲುಗಳು ಇಲ್ಲದೆ ಎರಡನೇ ಬಾರಿಗೆ ಗದ್ದುಗೆಗೇರಿದ ಬಳಿಕ ಕೊರೊನಾ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಇವೆಲ್ಲವುಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ಮೋದಿ ಸರ್ಕಾರ ಜನಪ್ರಿಯತೆಯಲ್ಲಿ ಈಗಲೂ ಮುನ್ನಡೆಯಲ್ಲಿದೆ.
‘ಲೋಕಲ್ ಸರ್ಕಲ್ಸ್’ ಎಂಬ ಖಾಸಗಿ ಸಂಸ್ಥೆ ಸಮೀಕ್ಷೆ ನಡೆಸಿದ ವೇಳೆ ಈ ಅಂಶ ಬಹಿರಂಗವಾಗಿದ್ದು, 2020ಕ್ಕೆ ಹೋಲಿಸಿದರೆ ಈ ಬಾರಿ ಮೋದಿ ಸರ್ಕಾರದ ಜನಪ್ರಿಯತೆ ಶೇಕಡಾ 16ರಷ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆ ಶೇಕಡ 67 ರಷ್ಟು ಮಂದಿ ಮೋದಿ ಸರ್ಕಾರ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡ 47ರಷ್ಟು ಮಂದಿ, ನಿರುದ್ಯೋಗ ವಿಚಾರದಲ್ಲಿ ಮೋದಿ ಸರ್ಕಾರ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದ್ದರೆ, ಇನ್ನು ಶೇಕಡ 60ರಷ್ಟು ಮಂದಿ ಕೋಮು ಸೌಹಾರ್ದ ಸಮನ್ವಯಕ್ಕೆ ಈ ಸರ್ಕಾರ ಶ್ರಮಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.