ಭಾರತದಲ್ಲಿ ತುಳಸಿಯನ್ನು ದೇವರು ಅಂತ ಭಾವಿಸುತ್ತಾರೆ. ತುಳಸಿ ಗಿಡದಲ್ಲಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂದು ಪುರಾಣಗಳು ಹೇಳಿವೆ. ಅದೇ ರೀತಿ ತುಳಸಿ ಗಿಡವನ್ನು ಆಯುರ್ವೇದ ಔಷಧಿಯಾಗಿ ಬಳಸಿಕೊಳ್ಳುತ್ತಿದೆ.
ತುಳಸಿ ಎಲೆಯನ್ನು ಸೇವಿಸುವ ಅಥವಾ ನೀರಿನ ಮುಖಾಂತರ ಕುಡಿಯುವ ಮೂಲಕ ಹಲವು ಲಾಭಗಳನ್ನು ಪಡೆಯಬಹುದು. ಇದು ನಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ತುಳಸಿ ಎಲೆಯಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು ಇದು ಸೋಂಕಿನ ವಿರುದ್ಧ ಹೋರಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಯನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ.
ಪ್ರತಿ 2 ದಿನಕೊಮ್ಮೆ 5 ತುಳಸಿ ಎಲೆಯನ್ನು ಸೇವನೆ ಮಾಡಿದರೆ ಕಾಡುವ ಶೀತದ ಸಮಸ್ಯೆ ನಿವಾರಣೆಯಾಗುತ್ತದೆ. ತುಳಸಿ ಎಲೆಯಲ್ಲಿ ಬಾಯಿಯ ದುರ್ವಾಸನೆ ಮತ್ತು ಇತರ ಸಮಸ್ಯೆಗಳನ್ನು ನಿವಾರಿಸುವ ಅದ್ಭುತ ಗುಣವಿದೆ. ಈ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿರುವುದರಿಂದ ಇದು ಬಾಯಿಯ ದುರ್ವಾಸನೆಯನ್ನು ನಿವಾರಣೆ ಮಾಡುತ್ತದೆ.