alex Certify ಅದ್ಭುತಗಳಿಂದ ಕೂಡಿದೆ ಮಾನವ ʼದೇಹʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಭುತಗಳಿಂದ ಕೂಡಿದೆ ಮಾನವ ʼದೇಹʼ

ಮಾನವ ದೇಹವು ಅದ್ಭುತಗಳಿಂದ ಕೂಡಿದೆ. ಪ್ರತಿ ಕ್ಷಣವೂ ಅದು ಕೆಲಸ ಮಾಡುತ್ತಿರುತ್ತದೆ. ನಿದ್ರಿಸಿದಾಗ ಹಾಗೂ ಎಚ್ಚರವಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ದೇಹದ ಅಂಗಗಳು ಹಾಗೂ ಅದರ ಕೆಲಸವನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ.

ಮಾನವನ ದೇಹ ನಾವು ತಿಳಿದಷ್ಟು ದುರ್ಬಲವಲ್ಲ. ಕಬ್ಬಿಣವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಅದಕ್ಕಿದೆ.

ಮಾನವ ದೇಹದಲ್ಲಿ ಆಮ್ಲವು ರೂಪುಗೊಳ್ಳುತ್ತದೆ. ಆಮ್ಲವನ್ನು ಪಿಎಂ ಮಟ್ಟದಲ್ಲಿ 1 ರಿಂದ 14 ರವರೆಗೆ ಅಳೆಯಲಾಗುತ್ತದೆ. ಕಡಿಮೆ ಪಿಎಚ್ ಮಟ್ಟ ಬಲವಾದ ಆಮ್ಲ. ಮಾನವನ ಹೊಟ್ಟೆಯಲ್ಲಿ ಕಂಡುಬರುವ ಆಮ್ಲವು ಸಾಮಾನ್ಯವಾಗಿ 1.0 ರಿಂದ 2.0 ರಷ್ಟಿರುತ್ತದೆ, ಅಂದರೆ ಪಿಎಚ್ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ.

ಅಧ್ಯಯನದ ಪ್ರಕಾರ, ಮಾನವನ ಹೊಟ್ಟೆಯಲ್ಲಿ ಕಂಡು ಬರುವ ಆಮ್ಲವು ತೀಕ್ಷ್ಣವಾದ ಬ್ಲೇಡನ್ನು ಸಹ ಸುಲಭವಾಗಿ ಕರಗಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ವರದಿಯ ಪ್ರಕಾರ, ಹೊಟ್ಟೆಯಲ್ಲಿರುವ ಆಮ್ಲವು ಎಷ್ಟು ಪ್ರಬಲವಾಗಿದೆಯೆಂದರೆ ಕಬ್ಬಿಣದಿಂದ ಮಾಡಿದ ಈ ಬ್ಲೇಡ್, ಆಮ್ಲದಲ್ಲಿ 2 ಗಂಟೆಗಳಲ್ಲಿ ಕರಗುತ್ತದೆ. ಮಾನವ ದೇಹಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಬಾಯಿಯಿಂದ ಹೊಟ್ಟೆಗೆ ಹೋಗುವ ವೇಳೆ ಮಾನವನ ದೇಹಕ್ಕೆ ಬ್ಲೇಡ್ ಸಾಕಷ್ಟು ಹಾನಿ ಮಾಡುತ್ತದೆ. ಇದ್ರಿಂದ ಜೀವ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಹೊಟ್ಟೆಯಲ್ಲಿ ಬ್ಲೇಡ್ ಕರಗುತ್ತದೆ ಎಂಬ ಕಾರಣಕ್ಕೆ ಎಂದೂ ಬ್ಲೇಡ್ ತಿನ್ನಲು ಹೋಗಬೇಡಿ. ಇದು ಹೋಲಿಕೆಗಾಗಿ ವಿಜ್ಞಾನಿಗಳು ನೀಡಿರುವ ಮಾಹಿತಿಯಷ್ಟೇ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...