ನಮ್ಮ ನಿತ್ಯದ ಬದುಕಿನಲ್ಲಿ ನಿದ್ದೆಗೆ ಅತ್ಯಂತ ಮಹತ್ವವಿದೆ. ಮಾರನೇ ದಿನದ ಎಲ್ಲಾ ಕೆಲಸಗಳಿಗೂ ನಿಮ್ಮ ದೇಹದಲ್ಲಿ ನಿದ್ದೆಯಿಂದ್ಲೇ ಚೈತನ್ಯ ಬರುತ್ತದೆ.
ಆದ್ರೆ ನಿದ್ದೆ ಮಾಡುವ ಸಮಯದಲ್ಲಿ ನೀವು ಮಾಡುವ ಸಣ್ಣ ಪುಟ್ಟ ಕೆಲಸಗಳು ಅದೃಷ್ಟ ನಿಮ್ಮ ಜೊತೆಗೇ ಇರುವಂತೆ ಮಾಡುತ್ತವೆ. ಜೊತೆಗೆ ಚೆನ್ನಾಗಿ ನಿದ್ದೆ ಮಾಡಲು ಸಹಕರಿಸುತ್ತವೆ.
ಮಲಗುವ ಮುನ್ನ ಚಿಕ್ಕ ಪೌಚ್ ಒಂದರಲ್ಲಿ ಸೋಂಪನ್ನು ಹಾಕಿ ದಿಂಬಿನ ಕೆಳಗೆ ಇಟ್ಟುಕೊಳ್ಳಿ. ಅದರಿಂದ ಕೆಟ್ಟ ಕನಸುಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ತಾಮ್ರದ ತಂಬಿಗೆಯೊಂದರಲ್ಲಿ ನೀರು ತುಂಬಿ ನಿಮ್ಮ ತಲೆಯ ಸಮೀಪದಲ್ಲೇ ಇಟ್ಟುಕೊಂಡು ಮಲಗಿ. ಮರುದಿನ ಬೆಳಗ್ಗೆ ಆ ನೀರನ್ನು ಗಿಡಗಳಿಗೆ ಹಾಕಿದರೆ ಅದೃಷ್ಟ ನಿಮ್ಮದಾಗುತ್ತದೆ.
ಮಲಗುವ ಮುನ್ನ ಒಳ್ಳೊಳ್ಳೆ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಇದರಿಂದ ಒತ್ತಡ ಕಡಿಮೆಯಾಗುತ್ತದೆ. ಯಾವಾಗಲೂ ಪೂರ್ವ ದಿಕ್ಕಿಗೆ ತಲೆಯಿಟ್ಟು ಮಲಗಿ. ಆಗ ನೆಮ್ಮದಿಯ ನಿದ್ದೆ ನಿಮ್ಮದಾಗುತ್ತದೆ.
ಮಲಗುವ ಮುನ್ನ ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ 10 ನಿಮಿಷ ಧ್ಯಾನ ಮಾಡಿ. ಇದರಿಂದ ನಿಮ್ಮ ಏಕಾಗ್ರತೆ ಮತ್ತು ಮೆದುಳಿನ ಶಕ್ತಿ ಹೆಚ್ಚುತ್ತದೆ. ನಿಮ್ಮ ಸುತ್ತಮುತ್ತ ಇರುವ ಯಶಸ್ವಿ ವ್ಯಕ್ತಿಗಳೆಲ್ಲ ಇದನ್ನು ಅಳವಡಿಸಿಕೊಂಡಿರುತ್ತಾರೆ.
ಬಿಸಿ ನೀರಿನಿಂದ ನಿಮ್ಮ ಪಾದಗಳನ್ನು ತೊಳೆದುಕೊಳ್ಳಿ. ನಂತರ ಕೊಬ್ಬರಿ ಎಣ್ಣೆಗೆ ಕರ್ಪೂರವನ್ನು ಮಿಕ್ಸ್ ಮಾಡಿ ಹಿಮ್ಮಡಿಗಳಿಗೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ನಿದ್ದೆಗೆ ಯಾವುದೇ ಭಂಗ ಬರುವುದಿಲ್ಲ.
ಮಲಗುವ ಮುನ್ನ ಒಂದು ಕಿಲೋ ಮೀಟರ್ ವಾಕ್ ಮಾಡುವುದು ಉತ್ತಮ. 15 ನಿಮಿಷಗಳ ಕಾಲ ನಡೆದಾಡಿದ್ರೆ ನಿಮಗೆ ಬೇಗ ನಿದ್ದೆ ಆವರಿಸಿಕೊಳ್ಳುತ್ತದೆ. ಸಾಧ್ಯವಾದಲ್ಲಿ ಮಲಗುವ ಮೊದಲು ವಿಷ್ಣು ಮಂತ್ರವನ್ನು ಜಪಿಸಿ.