ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ.
ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ ಭಿನ್ನ ಗುಣಗಳನ್ನು ಹೊಂದಿರುತ್ತಾಳೆ.
ಶಾಸ್ತ್ರಗಳ ಪ್ರಕಾರ ಕೆಲ ಮುಖ್ಯ ಗುಣಗಳನ್ನು ಹೊಂದಿರುವ ಹುಡುಗಿಯರನ್ನು ಕಣ್ಣು ಮುಚ್ಚಿಕೊಂಡು ಮದುವೆಯಾಗಬಹುದು. ಅವ್ರು ಇಡೀ ಕುಟುಂಬದ ಯಶಸ್ಸಿಗೆ ಕಾರಣವಾಗ್ತಾರೆ.
ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಅನುಸರಿಸುವ, ಅದಕ್ಕೆ ಮಹತ್ವ ನೀಡುವ ಹುಡುಗಿಯರನ್ನು ಮದುವೆಯಾಗಿ ಬಂದ್ರೆ ಕುಟುಂಬದಲ್ಲಿ ಸಂತೋಷ ಮನೆ ಮಾಡಿರಲಿದೆ. ಕುಟುಂಬದ ಯಶಸ್ಸಿಗೆ ಈ ಮಹಿಳೆಯರು ಶ್ರಮಿಸುತ್ತಾರೆ.
ದೊಡ್ಡವರು, ಮಕ್ಕಳಿಗೆ ಗೌರವ ನೀಡುವ, ಅವ್ರ ಬಗ್ಗೆ ಕಾಳಜಿ ತೋರುವ ಹುಡುಗಿಯರನ್ನು ಮದುವೆಯಾಗಬಹುದು. ಕುಟುಂಬ ನಿರ್ವಹಣೆಗೆ ಈಕೆ ಸಮರ್ಥಳಾಗಿರುತ್ತಾಳೆ.
ಸದಾ ಖುಷಿ ಖುಷಿಯಾಗಿ, ಒಳ್ಳೆ ಮಾತುಗಳನ್ನಾಡುವ ಹುಡುಗಿಯನ್ನು ಮದುವೆಯಾಗಬಹುದು. ಇವಳು ಪತಿಗೆ ಅದೃಷ್ಟ ತರುತ್ತಾಳೆ ಎಂದು ಶಾಸ್ತ್ರ ಹೇಳುತ್ತದೆ.
ಎಲ್ಲರನ್ನೂ ಪ್ರೀತಿಯಿಂದ ನೋಡುವ ಹುಡುಗಿ ಗಂಡನಿಗೆ ಮಾತ್ರವಲ್ಲ ಕುಟುಂಬದ ಸದಸ್ಯರಿಗೂ ಒಳ್ಳೆಯದು ಬಯಸುತ್ತಾಳೆ.
ಎಲ್ಲರ ಬಗ್ಗೆಯೂ ಕಾಳಜಿ ತೋರುವ ಜೊತೆಗೆ ಪತಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸಲಹೆ ನೀಡುವ ಬುದ್ದಿವಂತ ಮಹಿಳೆ ಕುಟುಂಬಕ್ಕೆ ಬಂದ್ರೆ ಒಳ್ಳೆಯದು.