ಮನೆಯ ಪ್ರತಿಯೊಂದು ಭಾಗ ಮುಖ್ಯ. ಮನೆಯ ಮುಖ್ಯದ್ವಾರ ಮಹತ್ವದ ಪಾತ್ರ ವಹಿಸುತ್ತದೆ. ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡುವುದು ಈ ಮುಖ್ಯದ್ವಾರದಿಂದ. ಮುಖ್ಯದ್ವಾರದ ಬಳಿಯಿರುವ ಕೆಲ ವಸ್ತುಗಳು ಅದೃಷ್ಟದ ಬದಲು ದುರಾದೃಷ್ಟಕ್ಕೆ ಕಾರಣವಾಗುತ್ತದೆ.
ಮನೆಯ ಮುಖ್ಯದ್ವಾರದ ಬಳಿ ಎಂದೂ ದೇವಸ್ಥಾನ ಅಥವಾ ಯಾವುದೇ ಧಾರ್ಮಿಕ ಮಂದಿರ ಇರಬಾರದು. ಇದು ಮನೆಯ ಶಾಂತಿ ಕದಡಲು ಕಾಣವಾಗುತ್ತದೆ.
ಮನೆಯ ಮುಂದೆ ಅಥವಾ ಮುಖ್ಯ ದ್ವಾರದ ಬಳಿ ಕಸದ ತೊಟ್ಟಿಗಳು ಇರಬಾರದು. ಮನೆ ಮುಂದೆ ಕಸವಿದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಪ್ರವೇಶ ಮಾಡಲು ದಾರಿಯಾಗುತ್ತದೆ. ಮನೆಯಲ್ಲಿ ಸದಾ ಗಲಾಟೆ-ಜಗಳ ನಡೆಯುತ್ತಿರುತ್ತದೆ.
ಮನೆಯ ಹೊರಗೆ ಕೊಳಕು ನೀರು ಹರಿಯಲು ಬಿಡಬೇಡಿ. ಕೊಳಕು ನೀರು ಹರಿಯುವ ಗಟಾರ ಇರಬಾರದು. ಮನೆ ಮುಂದೆ ಕೊಳಕು ನೀರಿದ್ದರೆ ಮನೆಯನ್ನು ಸದಾ ಆರ್ಥಿಕ ಸಮಸ್ಯೆ ಕಾಡುತ್ತದೆ.
ಮನೆಯ ಮುಂದೆ ಗಿಡ ಬೆಳೆಸೋದು ಈಗ ಫ್ಯಾಷನ್. ಆದ್ರೆ ಕೆಲವೊಂದು ಗಿಡ ನಕಾರಾತ್ಮಕ ಶಕ್ತಿ ಮನೆ ಪ್ರವೇಶಕ್ಕೆ ಕಾರಣವಾಗುತ್ತದೆ. ಮನೆ ಮುಂದೆ ಒಣಗಿದ ಗಿಡಗಳು ಎಂದೂ ಇರಬಾರದು.