ಭಾರತೀಯ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಉಷಾ ಅವರು ಬಿಲ್ಡರ್ ಒಬ್ಬರೊಂದಿಗೆ ಸೇರಿ ಮೋಸ ಮಾಡಿದ್ದಾರೆ ಎಂದು ಜೆಮ್ಮಾ ಜೋಸೆಫ್ ಎಂಬ ವ್ಯಕ್ತಿ ಕೇರಳದ ಕೋಝಿಕೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೋಸೆಫ್ ಅವರು ಕೋಝಿಕೋಡ್ ನಲ್ಲಿ ಬಿಲ್ಡರ್ ಒಬ್ಬರಿಂದ ಫ್ಲಾಟ್ ಖರೀದಿ ಮಾಡಿದ್ದರು. ಇದಕ್ಕೆ 46 ಲಕ್ಷ ರೂಪಾಯಿ ಹಣ ಸಂದಾಯ ಮಾಡಿದ್ದರು. ಆದರೆ, ಗಡುವು ಮುಗಿದಿದ್ದರೂ ಬಿಲ್ಡರ್ ಮನೆ ಹಸ್ತಾಂತರಿಸಿಲ್ಲ. ಪಿ.ಟಿ. ಉಷಾ ಅವರು ಮಧ್ಯಸ್ಥಿಕೆ ವಹಿಸಿ ಎಲ್ಲ ಹಣವನ್ನು ಬಿಲ್ಡರ್ ಗೆ ಈಗಾಗಲೇ ಸಂದಾಯ ಮಾಡಿಸಿದ್ದಾರೆ.
BIG NEWS: MES ನಿಷೇಧಿಸುವ ಚಿಂತನೆಯಿಲ್ಲ; ಅವರೂ ನಮ್ಮವರೇ ಎಂದ ಸಚಿವ ವಿ.ಸೋಮಣ್ಣ
ಆದರೆ, ಹಣ ನೀಡಿದ್ದರೂ ಫ್ಲಾಟ್ ನೀಡಲು ವಿಳಂಬ ಮಾಡುತ್ತಿದ್ದಾರೆ. ಅವರಿಬ್ಬರೂ ಸೇರಿಕೊಂಡು ನನಗೆ ಮೋಸ ಮಾಡಿದ್ದಾರೆ ಎಂದು ಜೋಸೆಫ್ ಆರೋಪಿಸಿದ್ದಾರೆ.
ಪಿ.ಟಿ. ಉಷಾ ಸೇರಿದಂತೆ 6 ಜನರ ಮೇಲೆ ದೂರು ದಾಖಲಾಗಿದೆ. ಬಿಲ್ಡರ್ ಗಳ ಮೇಲೆ ನಿಗಾ ಇಡುವ ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಸಲಹೆಯ ಆಧಾರದ ಮೇಲೆ ಇವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.