ನಾಗರಹಾವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಕಿಂಗ್ ಕೋಬ್ರಾಗೆ ಸಂಬಂಧಿಸಿದ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳು ಅನೇಕರಿಗೆ ತಿಳಿದಿಲ್ಲ. ಉಗುಳುವ ನಾಗರ ಹಾವುಗಳನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅವು ತುಂಬಾ ವಿಷಕಾರಿಯೂ ಹೌದು. ಅವುಗಳ ಉದ್ದ ಐದು ಅಡಿಗಳವರೆಗೆ ಇರುತ್ತದೆ. ಕಿಂಗ್ ಕೋಬ್ರಾ ಒಂದು ರೀತಿಯಲ್ಲಿ ದೀರ್ಘಾಯುಷಿ, ಇದು ಸುಮಾರು 40-45 ವರ್ಷಗಳು ಬದುಕುತ್ತದೆ ಎಂದು ಹೇಳಲಾಗುತ್ತದೆ.
ಕಿಂಗ್ ಕೋಬ್ರಾ ಹಾವುಗಳ ರಾಜ. ಇಂಡಿಯನ್ ಸ್ಪೆಕ್ಟಾಕಲ್ಡ್ ಕೋಬ್ರಾ, ಏಷ್ಯನ್ ಕೋಬ್ರಾ, ಅಥವಾ ಬೈನೋಸೆಲೆಟ್ ಕೋಬ್ರಾ ಎಂದೂ ಕರೆಯಲ್ಪಡುವ ಇಂಡಿಯನ್ ಕೋಬ್ರಾ ಹೆಚ್ಚು ವಿಷಕಾರಿ ಹಾವಿನ ಜಾತಿಯಾಗಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಹಾವು ಇನ್ಲ್ಯಾಂಡ್ ತೈಪಾನ್. ಇದು ಅತ್ಯಂತ ಅಪಾಯಕಾರಿ ಹಾವುಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಡೈನೋಸಾರ್ಗಳ ಯುಗದಲ್ಲಿ ಕಂಡುಬಂದ ಟೈಟಾನೊಬೋವಾ ಎಂಬ ಹಾವು ಭೂಮಿಯ ಮೇಲೆ ಇರುವ ಅತಿದೊಡ್ಡ ಹಾವು ಎಂದು ಪರಿಗಣಿಸಲಾಗಿದೆ.
ನಾಗರ ಹಾವು ಏನು ತಿನ್ನುತ್ತದೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ನಿಜವಾದ ನಾಗರಹಾವಿನ ಆಹಾರದಲ್ಲಿ ಕಪ್ಪೆಗಳು, ಹಲ್ಲಿಗಳು, ಮಿಡತೆಗಳು, ಇಲಿ, ಪಕ್ಷಿ ಮತ್ತು ಮೀನುಗಳು ಸೇರಿವೆ. ಇದಕ್ಕೆ ವಿರುದ್ಧವಾಗಿ ಕಿಂಗ್ ಕೋಬ್ರಾದ ಆಹಾರದ ಮುಖ್ಯ ಭಾಗವೆಂದರೆ ಇತರ ಸಣ್ಣಪುಟ್ಟ ಹಾವುಗಳು. ವಿಶ್ವದಲ್ಲೇ ಅತ್ಯಂತ ಸುಂದರವಾದ ಹಾವಿನ ಹೆಸರು ಶೀಲ್ಡ್ ಟೇಲ್. ಕಾಡಿನಲ್ಲಿ ಅದು ಹೇಗೆ ವರ್ತಿಸುತ್ತದೆ ಅನ್ನೋದು ಇನ್ನೂ ಯಾರ ಕಣ್ಣಿಗೂ ಬಿದ್ದಿಲ್ಲ. ಇದನ್ನು ಬಿಟ್ಟರೆ ಹಳದಿ ಬಣ್ಣದ ಬರ್ಮೀಸ್ ಹೆಬ್ಬಾವನ್ನು ಕೂಡ ಅತಿ ಸುಂದರವೆಂದು ಪರಿಗಣಿಸಲಾಗುತ್ತದೆ.