ಸಾಮಾನ್ಯವಾಗಿ ನೀವು ತಿನ್ನುವು ಚಿಪ್ಸ್ ಗೆ ಎಷ್ಟಿರುತ್ತದೆ. 100 ರೂ. 200 ರೂ. ಅಥವಾ 500 ರೂ..? ಆದರೆ, ಇಲ್ಲೊಂದೆಡೆ ಮಾರಾಟವಾದ ಚಿಪ್ಸ್ ಬೆಲೆ ಕೇಳಿದ್ರೆ ದಂಗಾಗ್ತೀರಾ..!
ಏಸಿಂಗ್ಯುಲರ್ ಪ್ರಿಂಗಲ್ಸ್ ಕ್ರಿಸ್ಪ್ ಇ-ಬೇನಲ್ಲಿ ಪೌಂಡ್ 2,000 ಅಂದ್ರೆ ಸರಿಸುಮಾರು 1.9 ಲಕ್ಷ ರೂ.ಗೆ ಮಾರಾಟವಾಗಿದೆ. ಜನರು ಚಿಪ್ಸ್ ತಿನ್ನುವಾಗ ವಿಚಿತ್ರಾಕಾರದ ಚಿಪ್ಸ್ ಇರುವುದು ಸಾಮಾನ್ಯ. ಆದರೆ, ಕೆಲವೊಮ್ಮೆ ಈ ವಿಭಿನ್ನ ಆಕಾರಗಳು ತುಂಬಾ ಅಪರೂಪವಾಗಿದ್ದು, ಜನರು ಅವುಗಳನ್ನು ಅಂತರ್ಜಾಲದಲ್ಲಿ ಹರಾಜು ಹಾಕುತ್ತಾರೆ.
ಈ ಬಳಕೆದಾರರೂ ಕೂಡ ಅದನ್ನೇ ಮಾಡಿದ್ದಾರೆ. ಹುಳಿ ಕ್ರೀಮ್ ಮತ್ತು ಈರುಳ್ಳಿ ಸುವಾಸನೆಯ ಪ್ರಿಂಗಲ್ ಅನ್ನು ಅತ್ಯಂತ ಅಪರೂಪ ಎಂದು ಶೀರ್ಷಿಕೆ ನೀಡಿ ಬಿ-ಬೇನಲ್ಲಿ ಟ್ಯಾಗ್ ಮಾಡಿದ್ದಾನೆ. ಕೇವಲ ನೂರು ರೂಪಾಯಿಗಳಿಗೆ ಪ್ರಿಂಗಲ್ಸ್ ಅನ್ನು ಖರೀದಿಸಬಹುದಾದರೂ, ಕೇವಲ ಒಂದು ಪ್ರಿಂಗಲ್‌ಗೆ ಸುಮಾರು 1.9 ಲಕ್ಷ ರೂ. ಹಣ ಸಿಕ್ಕಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಇಂತಹ ಘಟನೆಗಳು ಆಗಾಗ್ಗೆ ಸಂಭವಿಸಿದೆ. ಕಳೆದ ವರ್ಷ, ಆಸ್ಟ್ರೇಲಿಯಾದ ಬಾಲಕಿಯೊಬ್ಬಳು ಉಬ್ಬಿದ ಡೊರಿಟೊವನ್ನು ಹರಾಜು ಹಾಕಿದ್ದಳು. ಇದರಲ್ಲಿ ಆಕೆಗೆ 15 ಲಕ್ಷ ರೂ. ಲಭಿಸಿತ್ತು.