ಅತ್ತೆ-ಸೊಸೆ ಗಲಾಟೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ. ಮನೆ ಮುರಿಯಲು ಇದು ಕಾರಣವಾಗುತ್ತದೆ. ಅತ್ತೆ-ಸೊಸೆ ಜಗಳದಿಂದ ಮುಕ್ತಿ ಪಡೆಯಲು ಅನೇಕರು ಪ್ರಯತ್ನ ನಡೆಸ್ತಾರೆ. ಆದ್ರೆ ಅನೇಕ ಬಾರಿ ಇದು ಸಾಧ್ಯವಾಗುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ತೆ-ಸೊಸೆ ಸಂಬಂಧ ಗಟ್ಟಿಗೊಳಿಸುವ ಉಪಾಯವನ್ನೂ ಹೇಳಲಾಗಿದೆ.
ಅಡುಗೆ ಮನೆಯ ಪಾತ್ರೆಗಳು ಕೆಳಗೆ ಬೀಳದಂತೆ ನೋಡಿಕೊಳ್ಳಿ. ಹಾಗೆ ಪಾತ್ರೆ ಶಬ್ಧ ದೊಡ್ಡದಾಗಿ ಕೇಳಬಾರದು. ಪಾತ್ರೆ ಶಬ್ಧಗಳು ಅತ್ತೆ-ಸೊಸೆ ಜಗಳವನ್ನು ಹೆಚ್ಚು ಮಾಡುತ್ತದೆ.
ಮನೆಯನ್ನು ಸದಾ ಸ್ವಚ್ಛವಾಗಿಡಿ. ಮನೆಯ ಸೊಸೆ ಸೂರ್ಯೋದಯಕ್ಕೂ ಮುನ್ನವೆ ಎದ್ದು ಮನೆಯ ಕಸ ಗುಡಿಸಿ ಅದನ್ನು ಮನೆಯಿಂದ ಹೊರಗೆ ಹಾಕಬೇಕು.
ಮನೆಯಲ್ಲಿ ಪೂರ್ವಜರ ಪೂಜೆಯನ್ನು ಸದಾ ಮಾಡಬೇಕು. ಪ್ರತಿ ದಿನ ಮನೆಯಲ್ಲಿ ಮಾಡುವ ಮೊದಲ ರೊಟ್ಟಿಯನ್ನು ಆಕಳಿಗೆ ಹಾಗೂ ಕೊನೆ ರೊಟ್ಟಿಯನ್ನು ನಾಯಿಗೆ ಹಾಕಬೇಕು.
ಕಾವಲಿ ಬಿಸಿಯಾಗುವ ಮೊದಲು ನೀರು ಹಾಕಿ ನಂತ್ರ ರೊಟ್ಟಿಯನ್ನು ಸುಡಬೇಕು.
ಮನೆಯಲ್ಲಿ ಅತ್ತೆ-ಸೊಸೆ ಕದನವಿದ್ರೆ ಶನಿವಾರ ತೆಂಗಿನ ಕಾಯಿಯನ್ನು ಕಪ್ಪು ಬಟ್ಟೆಗೆ ಕಟ್ಟಿ, ಕಾಡಿಗೆಯಿಂದ 21 ಬಿಂದಿಯಿಟ್ಟು, ಮನೆಯ ಹೊರಗೆ ಅದನ್ನು ತೂಗಿಹಾಕಿ. ಕೆಟ್ಟ ದೃಷ್ಟಿ ಮನೆಗೆ ಬೀಳುವುದಿಲ್ಲ.