ಅಲಿಗಢ: ಮಹಿಳೆಯೊಬ್ಬಳು ತನ್ನ ಅತ್ತೆ ಮತ್ತು ನಾದಿನಿಯನ್ನು ಥಳಿಸುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಘಟನೆ ನಡೆದಿದೆ. ವರದಿಯ ಪ್ರಕಾರ, ವಯಸ್ಸಾದ ಮಹಿಳೆಯ ಪತಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಅವರ ಮರಣದ ನಂತರ, ಮಹಿಳೆ ತನ್ನ ಅತ್ತೆಯನ್ನು ಪೂರ್ವಜರ ಮನೆಯಿಂದ ಹೊರಹಾಕಿದ್ದಾಳೆ. ನಂತರ ಆಕೆ ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದಾರೆ.
ಮಂಗಳವಾರ ಆಕೆ ತನ್ನ ಮಗಳೊಂದಿಗೆ ತನ್ನ ಹಳೆಯ ಮನೆಗೆ ಭೇಟಿ ನೀಡಿದಾಗ, ಸೊಸೆ, ಅತ್ತೆ ಹಾಗೂ ನಾದಿನಿಗೆ ಥಳಿಸಿದ್ದಾಳೆ. ಆದರೆ, ವಿವಾದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹಿಂಸಾತ್ಮಕ ಹಲ್ಲೆಯಿಂದಾಗಿ ಇಬ್ಬರಿಗೂ ಗಾಯಗಳಾಗಿವೆ. ಎಲ್ಲವೂ ಗೊತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವೃದ್ಧೆ ದೂರಿದ್ದಾರೆ. ಆಸ್ತಿ ಮತ್ತು ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು ಸೊಸೆ ತನ್ನ ಮತ್ತು ಮಗಳ ಮೇಲೆ ದೌರ್ಜನ್ಯ ಎಸಗಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ವಿಡಿಯೊ ಸುಮಾರು 651,096ಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ. ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಈ ಬಗ್ಗೆ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.