ಪತ್ನಿಯನ್ನು ಕೊಂದ ಆರೋಪದ ಅಡಿಯಲ್ಲಿ ಹರಿಯಾಣದ ಸೋನಿಪತ್ ಜಿಲ್ಲೆಯ ಪೊಲೀಸರು ಪತಿ ಹಾಗೂ ಆತನ ಅತ್ತಿಗೆಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ವರದಿಯ ಪ್ರಕಾರ ಜಾನಿ ಎಂಬಾತನ ಪತ್ನಿ ಮಂಜು, ಹರಿಯಾಣದ ಸೋನಿಪತ್ ಸೆಕ್ಟರ್4ರ ಹಾಕಿ ಮೈದಾನದ ಬಳಿ ಶವವಾಗಿ ಪತ್ತೆಯಾಗಿದ್ದಾರೆ.
ಮೊದಲು ಇದನ್ನು ರಸ್ತೆ ಅಪಘಾತವೆಂದೇ ಭಾವಿಸಲಾಗಿತ್ತು. ಆದರೆ ಮಂಜು ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ವೇಳೆಯಲ್ಲಿ ಆಕೆಯ ದೇಹದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಕಲೆಗಳು ಪತ್ತೆಯಾಗಿವೆ.
ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದ ಜಾನಿ ಹಾಗೂ ಆತನ ಅಣ್ಣನ ಪತ್ನಿ ಮೀನಾಳನ್ನು ಬಂಧಿಸಿದ್ದಾರೆ. ಮಂಜುಗೆ ಜಾನಿ ಹಾಗೂ ಆತನ ಅತ್ತಿಗೆ ನಡುವೆ ಇರುವ ಅಕ್ರಮ ಸಂಬಂಧ ತಿಳಿದ ಹಿನ್ನೆಲೆಯಲ್ಲಿ ಇವರಿಬ್ಬರೂ ಸೇರಿ ಮಂಜುಳಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಅಕ್ರಮ ಸಂಬಂಧ ತಿಳಿದ ಬಳಿಕ ಮಂಜು ಮೀನಾ ಹಾಗೂ ಜಾನಿಗೆ ತೊಂದರೆಯೊಡ್ಡುತ್ತಿದ್ದಳು ಎಂದು ಕೋಪಗೊಂಡ ಇಬ್ಬರೂ ಈಕೆಯನ್ನು ಕೊಲೆ ಮಾಡಿ ಬಳಿಕ ರಸ್ತೆ ಅಪಘಾತದಂತೆ ಬಿಂಬಿಸಿದ್ದಾರೆ ಎನ್ನಲಾಗಿದೆ.