alex Certify ಅತಿ ಹೆಚ್ಚು ಗ್ರೀನ್ ಟೀ ಸೇವಿಸ್ತೀರಾ…? ಹಾಗಾದ್ರೆ ಇದನ್ನು ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಹೆಚ್ಚು ಗ್ರೀನ್ ಟೀ ಸೇವಿಸ್ತೀರಾ…? ಹಾಗಾದ್ರೆ ಇದನ್ನು ಓದಿ

ಖಾಲಿ ಹೊಟ್ಟೆಗೆ ಗ್ರೀನ್ ಟೀ ಕುಡಿದರೆ ಏನಾಗುತ್ತೆ? ನೀವೇ ಓದಿ | Is it good to drink  green tea in empty stomachಗ್ರೀನ್ ಟೀ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಗ್ರೀನ್ ಟೀ ರೋಗನಿರೋಧಕ ಶಕ್ತಿಯನ್ನು ಹೊಂದಿದೆ.

ಚಯಾಪಚಯ ವೇಗವನ್ನು ಹೆಚ್ಚಿಸುತ್ತದೆ.  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಗ್ರೀನ್ ಟೀಯಲ್ಲಿ ಸತು, ಮ್ಯಾಂಗನೀಸ್ ಮತ್ತು ವಿಟಮಿನ್ ಎ, ಬಿ, ಸಿ ಇದೆ. ಆದ್ರೆ ಅತಿಯಾದ್ರೆ ಅಮೃತವೂ ವಿಷ. ಅತಿ ಹೆಚ್ಚು ಗ್ರೀನ್ ಟೀ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಗ್ರೀನ್ ಟೀನಲ್ಲಿ ಟ್ಯಾನಿನ್ ಅಂಶವಿದೆ. ಹೆಚ್ಚಾಗಿ ಗ್ರೀನ್ ಟೀ ಸೇವನೆ ಮಾಡುವುದ್ರಿಂದ ಚರ್ಮದ ಶುಷ್ಕತೆ, ಬಾಯಿ ಹುಣ್ಣು, ಹೊಟ್ಟೆ ನೋವು, ಭೇದಿ ಕಾಣಿಸಿಕೊಳ್ಳುತ್ತದೆ.

ಗ್ರೀನ್ ಟೀ ಹೆಚ್ಚಾಗಿ ಸೇವನೆ ಮಾಡುವುದ್ರಿಂದ ಹೃದಯಬಡಿತ, ರಕ್ತದೊತ್ತಡ ಹೆಚ್ಚಾಗುತ್ತದೆ. ಗ್ರೀನ್ ಟೀಯಲ್ಲಿ ಕೆಫಿನ್ ಅಂಶವಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದ್ರಿಂದ ಹೃದಯ ಬಡಿತ ಹೆಚ್ಚಾಗುತ್ತದೆ.

ಮಾನಸಿಕ ಒತ್ತಡ ಹಾಗೂ ಚಿಂತೆ ಹೆಚ್ಚಾಗುವ ಸಾಧ್ಯತೆಯಿರುತ್ತದೆ. ಗ್ರೀನ್ ಟೀ ಒತ್ತಡ ಕಡಿಮೆ ಮಾಡುತ್ತದೆ ನಿಜ. ಆದ್ರೆ ಅತಿಯಾದ ಗ್ರೀನ್ ಟೀ ಸೇವನೆಯಿಂದ ಒತ್ತಡ ಹೆಚ್ಚಾಗುತ್ತದೆ. ಕೆಫಿನ್ ಇರುವುದು ಇದಕ್ಕೆ ಕಾರಣ.

ಕಬ್ಬಿಣದ ಅಂಶ ದೇಹಕ್ಕೆ ಸೇರದಂತೆ ಗ್ರೀನ್ ಟೀ ತಡೆಯುತ್ತದೆ. ಅತಿಯಾದ ಗ್ರೀನ್ ಟೀ ಸೇವನೆ ಮಾಡಿದ್ರೆ ನೀವು ಸೇವಿಸುವ ಆಹಾರದಲ್ಲಿರುವ ಕಬ್ಬಿಣದ ಅಂಶ ನಿಮ್ಮ ದೇಹ ಸೇರುವುದಿಲ್ಲ. ಇದ್ರಿಂದ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿ ರಕ್ತಹೀನತೆ ಕಾಡುವ ಸಾಧ್ಯತೆಯಿರುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...