
ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿ ಟೀನಾ ಧಾಬಿ ಸಾಕಷ್ಟು ಸುದ್ದಿಯಲ್ಲಿದ್ರು. ಅವರ ವೈಯಕ್ತಿಕ ಬದುಕಿನ ಘಟನೆಗಳು ಜಾಲತಾಣಗಳಲ್ಲಿ ಚರ್ಚೆಯಲ್ಲಿರುತ್ತವೆ. ಟೀನಾ ಧಾಬಿ ಅತ್ಯಂತ ಸುಂದರವಾಗಿರೋದ್ರಿಂದ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಆದ್ರೀಗ ಟೀನಾರನ್ನೂ ಹಿಂದಿಕ್ಕುವಂತಹ ಮತ್ತೊಬ್ಬ ಅಧಿಕಾರಿ ಇಲ್ಲಿದ್ದಾರೆ. ತಮ್ಮ ಸೌಂದರ್ಯ ಮತ್ತು ಕರ್ತವ್ಯ ನಿರ್ವಹಣೆಯಿಂದ್ಲೇ ಜನಮನ ಗೆದ್ದಿರುವ ಐಎಎಸ್ ಅಧಿಕಾರಿಗಳಲ್ಲಿ ಈಕೆ ಕೂಡ ಒಬ್ಬರು. ಈಕೆಯ ಹೆಸರು ಸ್ಮಿತಾ ಸಬರ್ವಾಲ್.
23ನೇ ವಯಸ್ಸಿಗೇ ಐಎಎಸ್ ಅಧಿಕಾರಿಯಾಗಿರೋ ಸ್ಮಿತಾರನ್ನು ಪೀಪಲ್ಸ್ ಆಫೀಸರ್ ಎಂದೇ ಕರೆಯಲಾಗುತ್ತದೆ. ಐಎಎಸ್ ಅಧಿಕಾರಿಯಾಗಿ ಅನೇಖ ಮಾದರಿ ಕೆಲಸಗಳನ್ನು ಮಾಡಿರೋ ಸ್ಮಿತಾ ಹಲವು ಪುರಸ್ಕಾರಗಳನ್ನು ಗಳಿಸಿದ್ದಾರೆ. ದೇಶಾದ್ಯಂತ ಐಎಎಸ್ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ. ಸ್ಮಿತಾ 2000ನೇ ಬ್ಯಾಚ್‌ನ ಐಎಎಸ್ ಟಾಪರ್. ನಾಲ್ಕನೇ ರ್ಯಾಂಕ್ ಗಳಿಸಿದ್ದರು. ಈಕೆ ನಿವೃತ್ತ ಸೇನಾಧಿಕಾರಿಗಳಾದ ಕರ್ನಲ್ ಪಿಕೆ ದಾಸ್ ಮತ್ತು ಪುರ್ಬಿ ದಾಸ್ ಅವರ ಪುತ್ರಿ.
ಮೂಲತಃ ಡಾರ್ಜಿಲಿಂಗ್‌ನವರಾದ ಸ್ಮಿತಾ 9ನೇ ತರಗತಿಯಿಂದ ಹೈದರಾಬಾದ್‌ನಲ್ಲಿ ಓದಿದ್ದಾರೆ. ಹೈದರಾಬಾದ್‌ನ ಮರ್ರೆಡ್‌ಪಲ್ಲಿಯ ಸೇಂಟ್ ಆನ್ಸ್‌ನಿಂದ 12ನೇ ತರಗತಿಯನ್ನು ಪೂರ್ಣಗೊಳಿಸಿದ್ದರು. 12ನೇ ತರಗತಿಯಲ್ಲಿ (ICSE ಬೋರ್ಡ್) ಮೊದಲ ಸ್ಥಾನ ಪಡೆದಿದ್ದರು.ಇದಾದ ಬಳಿಕ ಸೇಂಟ್ ಫ್ರಾನ್ಸಿಸ್ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಓದಿದ್ದಾರೆ. ಸ್ಮಿತಾ ಐಎಎಸ್ ಪರೀಕ್ಷೆಯ ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರು. 2000 ರಲ್ಲಿ ಎರಡನೇ ಬಾರಿ ನಾಲ್ಕನೇ ರ್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದಾರೆ.
ಸ್ಮಿತಾ ನಂತರ ತೆಲಂಗಾಣ ಕೇಡರ್‌ನಲ್ಲಿ ಐಎಎಸ್ ತರಬೇತಿ ಪಡೆದ್ರು. ಚಿತ್ತೂರಿನಲ್ಲಿ ಸಬ್ ಕಲೆಕ್ಟರ್ ಆಗಿದ್ದರು. ಇದಲ್ಲದೆ ಅವರು ಕಡಪಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕಿಯಾಗಿ, ವಾರಂಗಲ್ ಮುನ್ಸಿಪಲ್ ಕಮಿಷನರ್ ಆಗಿ ಮತ್ತು ಕರ್ನೂಲ್‌ನ ಜಂಟಿ ಕಲೆಕ್ಟರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಸ್ಮಿತಾ ಎಲ್ಲೆಲ್ಲಿ ಕರ್ತವ್ಯ ನಿರ್ವಹಿಸಿದ್ದಾರೋ ಅಲ್ಲೆಲ್ಲಾ ಜನಮನ್ನಣೆ ಗಳಿಸಿದ್ದಾರೆ. ಆಕೆ ರಿಯಲ್ ಜನಸೇವಕಿ ಎಂಬ ಅಭಿಪ್ರಾಯ ಜನರಲ್ಲಿದೆ.
ತೆಲಂಗಾಣ ರಾಜ್ಯದಲ್ಲಿ ಕೈಗೊಂಡ ಅನೇಕ ಸುಧಾರಣಾ ಕ್ರಮಗಳಿಂದ ಜನರು ಪ್ರಭಾವಿತರಾಗಿದ್ದಾರೆ. ಈಕೆ ಮುಖ್ಯಮಂತ್ರಿ ಕಚೇರಿಗೆ ನೇಮಕಗೊಂಡ ಮೊದಲ ಮಹಿಳಾ ಐಎಎಸ್ ಅಧಿಕಾರಿಯೂ ಹೌದು. ಪ್ರಸ್ತುತ ಅವರು ತೆಲಂಗಾಣ ಸಿಎಂ ಕಾರ್ಯದರ್ಶಿಯಾಗಿದ್ದಾರೆ. ಸ್ಮಿತಾ ಸಬರ್ವಾಲ್, ಟೀನಾ ಧಾಬಿಯನ್ನೂ ಮೀರಿಸುವಂತಹ ಚೆಲುವೆ. ಹಾಗಾಗಿ ಸೋಷಿಯಲ್ ಮೀಡಿಯಾಗಳಲ್ಲಿ ಇವರ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ.