ಸೆಕ್ಸ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ನಿಯಮಿತ ಸೆಕ್ಸ್ ಆರೋಗ್ಯ ವೃದ್ಧಿಸಿ ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ತಜ್ಞರು ಹೇಳ್ತಾರೆ. ಅತಿಯಾದ್ರೆ ಅಮೃತವೂ ವಿಷ ಎನ್ನುವಂತೆ ಅತಿಯಾದ ಸೆಕ್ಸ್ ಆಪತ್ತಿಗೆ ಕಾರಣವೆನ್ನುತ್ತದೆ ಸಂಶೋಧನೆ.
ಇತ್ತೀಚಿಗೆ ನಡೆದ ಸಂಶೋಧನೆ ಪ್ರಕಾರ, ಅತಿ ಹೆಚ್ಚು ಸಂಭೋಗ ಹಾಗೂ ಪ್ರತಿ ದಿನ ಸಂಭೋಗ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆಯಂತೆ. ಅತಿ ಹೆಚ್ಚಿನ ಸೆಕ್ಸ್ ದಿನಪೂರ್ತಿ ದಣಿವು ಕಾಡಲು ಕಾರಣವಾಗುತ್ತದೆ. ಅತಿಯಾದ ಸೆಕ್ಸ್ ನಿಂದ ಬಿಡುಗಡೆಯಾಗುವ ಹಾರ್ಮೋನ್ ಹೃದಯದ ಬಡಿತವನ್ನು ಹೆಚ್ಚು ಮಾಡುತ್ತದೆ. ಬಿಪಿ ಹೆಚ್ಚಾಗುವ ಜೊತೆಗೆ ಗ್ಲುಕೋಸ್ ಚಯಾಪಚಯದ ಮೇಲೆ ಪ್ರಭಾವ ಬೀರುತ್ತದೆ.
ಅತಿ ಹೆಚ್ಚು ಸೆಕ್ಸ್, ಲೈಂಗಿಕ ವ್ಯಸನಕ್ಕೆ ಕಾರಣವಾಗುತ್ತದೆ. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಅನೇಕ ವರ್ಷಗಳ ಕಾಲ ಪ್ರತಿದಿನ ಸಂಭೋಗ ಬೆಳೆಸಿದ್ರೆ ಯೋನಿಯಲ್ಲಿ ಉರಿ, ಸೋಂಕು ಕಾಡುತ್ತದೆ. ಸಾಮಾನ್ಯವಾಗಿ ಅತಿ ಹೆಚ್ಚು ಸೆಕ್ಸ್, ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ದಂಪತಿಗೆ ಬೆನ್ನು ನೋವಿನ ಸಮಸ್ಯೆ ಕಾಡುವುದು ಹೆಚ್ಚು.