ಹೆಚ್ಚಿನವರು ಮೈದಾ ಹಿಟ್ಟಿನಿಂದ ತಯಾರಿಸಿದ ಬಿಸಿಬಿಸಿಯಾದ ಕಚೋರಿಸ್, ಸಮೋಸಾ, ನೂಡಲ್ಸ್, ಬರ್ಗರ್, ಪಿಜ್ಜಾಗಳನ್ನು ಸೇವಿಸಲು ತುಂಬಾ ಇಷ್ಟಪಡುತ್ತಾರೆ. ಯಾಕೆಂದರೆ ಅವುಗಳು ಬಹಳ ರುಚಿಕರವಾಗಿರುತ್ತದೆ. ಆದರೆ ಇವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಹಿಟ್ಟಿನ ಆಹಾರಗಳನ್ನು ಸೇವಿಸಿದರೆ ನೀವು ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
*ಮೈದಾ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೇ ಇದು ಕೊಲೆಸ್ಟ್ರಾಲ್ ಮಟ್ಟ ಹಾಗೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನುಲಿನ್ ಪ್ರಮಾಣವನ್ನು ಕಡಿಮೆ ಮಾಡಿ ಮಧುಮೇಹ ಸಮಸ್ಯೆಗೆ ಕಾರಣವಾಗುತ್ತದೆ.
*ಇದರಲ್ಲಿ ಫೈಬರ್ ಅಂಶ ಕಡಿಮೆ ಇರುವುದರಿಂದ ಇದು ಮಲಬದ್ಧತೆ, ಅಜೀರ್ಣ, ಅತಿಸಾರ, ಹೊಟ್ಟೆಯ ಕಿರಿಕಿರಿ ಮುಂತಾದ ಸಮಸ್ಯೆಗೆ ಕಾರಣವಾಗುತ್ತದೆ.
*ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಇದರಲ್ಲಿ ಪ್ರೋಟೀನ್ ಇರದ ಕಾರಣ ಇದು ಮೂಳೆಗಳಿಂದ ಕ್ಯಾಲ್ಸಿಯಂನ್ನು ಎಳೆದುಕೊಂಡು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
*ಇದು ದೇಹದ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಅನಾರೋಗ್ಯಕ್ಕೊಳಗಾಗುತ್ತೀರಿ. ಕೆಲವು ದೊಡ್ಡ ದೊಡ್ಡ ಕಾಯಿಲೆಗೆ ಒಳಗಾಗಬಹುದು.