ತೂಕ ಕಳೆದುಕೊಳ್ಳಲು, ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ಅನೇಕರು ಬಿಸಿನೀರನ್ನು ಕುಡಿಯುತ್ತಾರೆ. ಇನ್ನು ಕೆಲವರು ಶೀತ, ಕಫ, ಕೆಮ್ಮಿನಿಂದ ಪಾರಾಗಲು ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.
ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯಬೇಕು ಅನ್ನೋದು ಅನೇಕ ತಜ್ಞರ ಸಲಹೆ. ಆದರೆ ಬಿಸಿನೀರು ಕುಡಿಯುವುದರಿಂದ ಪ್ರಯೋಜನಗಳಿವೆ ಅನ್ನೋದು ಸತ್ಯವಾದ್ರೂ, ಅದರಿಂದ ಅನಾನುಕೂಲತೆಗಳೂ ಇವೆ. ನೀವು ಅತಿಯಾಗಿ ಬಿಸಿಯಾಗಿರುವ ನೀರು ಕುಡಿದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬಾಯಾರಿಕೆಯಾದಾಗ ಹೆಚ್ಚು ಬಿಸಿ ನೀರು ಕುಡಿದರೆ ಅದು ನಿಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಹಲವು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಅತಿಯಾದ ಬಿಸಿ ನೀರು ಮೆದುಳಿನ ಜೀವಕೋಶಗಳಲ್ಲಿ ಊತವನ್ನು ಉಂಟುಮಾಡಬಹುದು. ಇದರಿಂದ ಮಾನಸಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಬಿಸಿನೀರು ಕುಡಿಯುವುದರಿಂದ ಕಿಡ್ನಿ ಸಮಸ್ಯೆಯೂ ಉಂಟಾಗುತ್ತದೆ.
ಮೂತ್ರಪಿಂಡಗಳು ವಿಶೇಷ ಕ್ಯಾಪಿಲ್ಲರಿ ವ್ಯವಸ್ಥೆಯನ್ನು ಹೊಂದಿವೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಬಿಸಿನೀರಿನಿಂದಾಗಿ ಕಿಡ್ನಿ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಎನ್ನುತ್ತಾರೆ ತಜ್ಞರು. ತುಂಬಾ ಬಿಸಿ ನೀರು ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ. ಇದು ಕರುಳಿಗೂ ಹಾನಿ ಮಾಡಬಹುದು. ಕರುಳಿನ ಸಮಸ್ಯೆ ಇರುವವರು ಬಿಸಿನೀರು ಕುಡಿಯದೇ ಇರುವುದು ಉತ್ತಮ. ಇದಲ್ಲದೆ ಬಿಸಿನೀರು ಬಾಯಿಯಲ್ಲಿ ಹುಣ್ಣುಗಳನ್ನು ಉಂಟುಮಾಡಬಹುದು.
ಬಿಸಿನೀರು ಕುಡಿಯುವುದರಿಂದ ಅನೇಕ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಇದು ಮೆದುಳು ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು. ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ಉಸಿರಾಟದ ತೊಂದರೆಯಂತಹ ಸಮಸ್ಯೆಗಳು ಉಂಟಾಗಬಹುದು. ಹೆಚ್ಚು ಬಿಸಿ ನೀರು ಕುಡಿಯುವುದರಿಂದ ನಮ್ಮ ದೇಹದ ಆಂತರಿಕ ಅಂಗಗಳಿಗೂ ಹಾನಿಯಾಗಬಹುದು. ಹೊಟ್ಟೆ ಉರಿ ಸಮಸ್ಯೆ ಕಾಡಬಹುದು. ಇದು ಅಪಾಯಕಾರಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು.