ಡ್ರೈ ಫ್ರುಟ್ಸ್ ಗಳು ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಾರೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುತ್ತಾರೆ. ಆದರೆ ಅತಿಯಾಗಿ ಡ್ರೈ ಫ್ರುಟ್ಸ್ ಗಳನ್ನು ಸೇವಿಸಿದರೆ ಅನಾರೋಗ್ಯದ ಸಮಸ್ಯೆಗಳು ಹೆಚ್ಚು ಕಾಡುತ್ತವೆ.
* ಡ್ರೈ ಫ್ರುಟ್ಸ್ ಗಳಲ್ಲಿ ಬಹಳಷ್ಟು ಫೈಬರ್ ಇರುತ್ತದೆ. ಇದನ್ನು ಅತಿಯಾಗಿ ಸೇವಿಸಿದಾಗ ಜೀರ್ಣಾಂಗ ವ್ಯವಸ್ಥೆಯು ಹದಗೆಡುತ್ತದೆ. ಇದರಿಂದ ನೀವು ಅಜೀರ್ಣ, ಹೊಟ್ಟೆ ನೋವು, ಮಲಬದ್ಧತೆ, ಅತಿಸಾರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
* ಡ್ರೈ ಫ್ರುಟ್ಸ್ ಗಳಲ್ಲಿ ಕ್ಯಾಲೋರಿ ಮತ್ತು ಕಾರ್ಬೋಹೈಡ್ರೇಟುಗಳು ಸಮೃದ್ಧವಾಗಿದೆ. ಇವುಗಳನ್ನು ಅತಿಯಾಗಿ ಸೇವಿಸಿದರೆ ತೂಕ ಹಲವಾರು ಪಟ್ಟು ಹೆಚ್ಚುತ್ತದೆ.
* ಡ್ರೈ ಫ್ರುಟ್ಸ್ ಗಳಿಗೆ ಮಾರುಕಟ್ಟೆಯಲ್ಲಿ ಸಕ್ಕರೆ ಮಿಕ್ಸ್ ಮಾಡಿರುತ್ತಾರೆ. ಇದನ್ನು ಅತಿಯಾಗಿ ಸೇವಿಸಿದರೆ ಹಲ್ಲು ಹುಳುಕು ಹಿಡಿದು ಹಲ್ಲುನೋವು ಸಮಸ್ಯೆ ಕಾಡುತ್ತದೆ.
*ಡ್ರೈ ಫ್ರುಟ್ಸ್ ಗಳು ರಕ್ತದಲ್ಲಿನ ಗ್ಲೊಕೋಸ್ ಪ್ರಮಾಣವನ್ನು ವೇಗವಾಗಿ ಹೆಚ್ಚಿಸುತ್ತದೆ. ಇದರಿಂದಾಗಿ ಶಕ್ತಿಯು ಹೆಚ್ಚುತ್ತದೆ. ಆದರೆ ತಕ್ಷಣವೇ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗಿ ದಣಿವು ಸಮಸ್ಯೆ ಕಾಡುತ್ತದೆ.
*ಡ್ರೈ ಫ್ರುಟ್ಸ್ ಗಳನ್ನು ಹಲವು ದಿನಗಳ ಕಾಲ ಸಂರಕ್ಷಿಸಲು ರಾಸಾಯನಿಕಗಳನ್ನು ಬಳಸುತ್ತಾರೆ. ಇದು ಅಸ್ತಮಾ ಸಮಸ್ಯೆ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಅಸ್ತಮಾ ರೋಗಿಗಳು ಇದನ್ನು ಸೇವಿಸಬೇಡಿ.